ಗಮನಿಸಿ : ಎಸ್‍ಬಿಐ ಎಟಿಎಂ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.16-ಇನ್ನು ಮುಂದೆ ಎಸ್‍ಬಿಐ ಬ್ಯಾಂಕ್‍ಗಳ ಎಟಿಎಂಗಳಲ್ಲಿ 10 ಸಾವಿರಕ್ಕೂ ಮೇಲ್ಟಟ್ಟು ಹಣ ಡ್ರಾ ಮಾಡಬೇಕಾದರೆ ಒಟಿಪಿ ನಮೂದಿಸುವುದನ್ನು ಕಡ್ಡಾಯ. ದೇಶದ್ಯಾಂತ ಇರುವ ಎಸ್‍ಬಿಐ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಈ ಹೊಸ ಪದ್ಧತಿ ಸೆ.18 ರಿಂದ ಜಾರಿಯಾಗಲಿದೆ. ಎಟಿಎಂ ಯಂತ್ರಕ್ಕೆ ಕಾರ್ಡ್ ಇನ್ಸರ್ಟ್ ಮಾಡಿ ಪಿನ್ ನಂಬರ್ ಒತ್ತಿದ ನಂತರ ಬ್ಯಾಂಕಿಗೆ ನೀವು ನೀಡಿರುವ ಮೊಬೈಲ್ ನಂಬರ್‍ಗೆ ಒಟಿಪಿ ಬರಲಿದೆ. ಒಟಿಪಿ ನಂಬರ್ ಅನ್ನು ನೀವು ಎಟಿಎಂ ಯಂತ್ರದಲ್ಲಿ ನಮೂದಿಸಿದರೆ ಮಾತ್ರ ಹಣ ನಿಮ್ಮ ಕೈ ಸೇರಲಿದೆ.

ಡಿಬಿಟ್ ಕಾರ್ಡ್‍ಗಳ ದುರ್ಬಳಕೆ, ಎಟಿಎಂ ವಂಚನೆ ತಪ್ಪಿಸಿ ತಮ್ಮ ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸಬೇಕು ಎಂಬ ಉದ್ದೇಶದಿಂದ ಈ ಹೊಸ ಮಾದರಿ ಹಣ ಡ್ರಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಎಸ್‍ಬಿಐ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹಣ ಡ್ರಾ ಮಾಡಲು ನಿಮ್ಮ ಮೊಬೈಲ್‍ಗೆ ಬರುವ ಒಟಿಪಿಯನ್ನು ಒಂದು ಭಾರಿ ಮಾತ್ರ ಹಣ ಡ್ರಾ ಮಾಡಲು ಉಪಯೋಗಿಸಬಹುದು. ಈ ಹೊಸ ಪದ್ಧತಿ ಎಸ್‍ಬಿಐ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಉಳಿದ ಬ್ಯಾಂಕ್‍ಗಳು ಈ ಸೇವೆಯನ್ನು ಇನ್ನು ಜಾರಿಗೆ ತಂದಿಲ್ಲ.

Facebook Comments