ಆತ್ಮನಿರ್ಭರ್ ಭಾರತ : ಪ್ರಧಾನಿ ಸ್ವಾತಂತ್ರೋತ್ಸವ ಭಾಷಣದ ಕೇಂದ್ರ ಬಿಂದು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.15- ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಆತ್ಮ ನಿರ್ಭರ್ ಭಾರತ ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ಭಾರತೀಯರು ಸಾಕಾರಗೊಳಿಸುತ್ತಾರೆ ಎಂಬ ಬಲವಾದ ನಂಬಿಕೆ ನನಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತ್ರಿವರ್ಣ ದ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಆತ್ಮನಿರ್ಬರ್ ಭಾರತ ಯೋಜನೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದರು.

ವಿಕಾಸದ ಈ ಯಾತ್ರೆಯಲ್ಲಿ ಸಮಾಜದಲ್ಲಿ ಜನರು ಹಿಂದೆ ಉಳಿದುಬಿಡುತ್ತಾರೆ, ಬಡತನದಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆತ್ಮ ನಿರ್ಭರ ಭಾರತವನ್ನಾಗಿಸಬೇಕು, ಹಿಂದುಳಿದ 110 ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳನ್ನು ಮುನ್ನಡೆಸುವ ಕುರಿತು ಆಲೋಚಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯಾವುದೇ ಇರಲಿ ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ. ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವಲ್ರ್ಡ್ ಘೋಷವಾಖ್ಯದೊಂದಿಗೆ ಮುನ್ನುಗ್ಗಬೇಕಿದೆ ಎಂದರು.

ವಿಶ್ವ ಕಲ್ಯಾಣದಲ್ಲಿ ಭಾರತದ ಕರ್ತವ್ಯವಿದೆ. ಭಾರತ ಸಶಕ್ತವಾಗಬೇಕಿದೆ, ಆತ್ಮ ನಿರ್ಭರವಾಗಬೇಕಿದೆ. ನಮಗೆ ನಮ್ಮ ಖುದ್ದಾದ ಸಾಮಥ್ರ್ಯವಿದ್ದರೆ ಇಡೀ ವಿಶ್ವದ ಅಭಿವೃದ್ಧಿಯಾಗಲಿದೆ. ಮಾನವ ಸಂಪದದಲ್ಲಿ ಮೌಲ್ಯವೃದ್ಧಿ ಮಾಡೋಣ. ಕಚ್ಚಾ ವಸ್ತುಗಳನ್ನು ವಿದೇಶಕ್ಕೆ ಕಳುಹಿಸುವುದು, ರೆಡಿ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಎಷ್ಟು ದಿನ ನಡೆಯುತ್ತದೆ. ಆತ್ಮ ನಿರ್ಭರವಾಗಲೇಬೇಕು ಎಂದು ಪುನರುಚ್ಚರಿಸಿದರು.

ಕೃಷಿ ಕ್ಷೇತ್ರದಲ್ಲಿ ನಾವು ‘ಆತ್ಮ ನಿರ್ಭರ’ರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ. ಆತ್ಮ ನಿರ್ಭರ ಭಾರತದ ಕನಸನ್ನು ದೇಶ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಭಾರತೀಯರ ಸಾಮಥ್ರ್ಯ ಸಾಮಥ್ರ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದರು.

ಕೃಷಿ ಕ್ಷೇತ್ರದಲ್ಲಿ ನಾವು ¾ಆತ್ಮ ನಿರ್ಭರರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ. ಆತ್ಮ ನಿರ್ಭರ ಭಾರತ¿ ಕನಸನ್ನು ಭಾರತ ಸಾಕಾರಗೊಳಿಸುತ್ತದೆ. ಭಾರತೀಯರ ಸಾಮಥ್ರ್ಯದ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಮೋದಿ ಬಲವಾಗಿ ಸಮರ್ಥಿಸಿಕೊಂಡರು.

Facebook Comments

Sri Raghav

Admin