ಎಟಿಪಿ ಟೆನ್ನಿಸ್ ರ‍್ಯಾಕಿಂಗ್ ಪ್ರಕಟ: ಅಗ್ರಪಟ್ಟಕ್ಕೇರಿದ ನೋವೊಕ್ ಡೊಕೋವಿಚ್

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾಡ್ರೀಡ್, ಮೇ 14- ಸೆರೆಬಿಯಾದ ಟೆನ್ನಿಸ್ ಮಾಂತ್ರಿಕ ನೋವೋಕ್ ಡೊಕೋವಿಚ್ ಮ್ಯಾಡ್ರೀಡ್ ಫೈನಲ್ಸ್‍ನಲ್ಲಿ ಗೆಲ್ಲುವ ಮೂಲಕ ಎಟಿಪಿ ಟೆನ್ನಿಸ್ ರ‍್ಯಾಕಿಂಗ್‍ನಲ್ಲಿ ಅಗ್ರಶ್ರೇಯಾಂಕಿತರಾಗಿ ಹೊರಹೊಮ್ಮಿದ್ದಾರೆ.  ಗ್ರೀಕ್ ಆಟಗಾರ ಸ್ಟೆಫಾನೋಸ್ರನ್ನು 6-3, 6-4 ನೇರ ಸೆಟ್‍ಗಳಿಂದ ಸೋಲಿಸುವ ಮೂಲಕ 4170 ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.

ಇದುವರೆಗೂ ನಂಬರ್ 1 ಸ್ಥಾನದಲ್ಲಿದ್ದ ಸ್ಪಾನಿಸ್‍ನ ರಫೇಲ್ ನಾಡಲ್ 2ನೆ ಸ್ಥಾನಕ್ಕೆ ಕುಸಿದಿದ್ದಾರೆ. ಡೊಕೋವಿಚ್ ಈಗ 12,115 ಪಾಯಿಂಟ್‍ಗಳನ್ನು ತನ್ನ ಬತ್ತಳಿಕೆಗೆ ಇಳಿಸಿಕೊಂಡಿದ್ದಾರೆ. ಮ್ಯಾಡ್‍ರೀಡ್ ಫೈನಲ್ಸ್‍ನಲ್ಲಿ ರನ್ನರ್‍ಅಪ್ ಆದ ಸ್ಟೇಫಾನೋಸ್ 2 ಸ್ಥಾನಗಳ ಜಿಗಿತದಿಂದ 7ನೆ ರ್ಯಾಂಕ್ ಅನ್ನು ಅಲಂಕರಿಸಿದ್ದಾರೆ.

ಟಾಪ್ 10 ಆಟಗಾರರು:
ನೋವೊಕ್ ಡೊಕೋವಿಚ್ (ಸೈಬೀರಿಯಾ 12,115 ಪಾಯಿಂಟ್ಸ್)
ರಫೇಲ್ ನಡಾಲ್ (ಸ್ಪೇನ್, 7.945 ಪಾಯಿಂಟ್ಸ್)
ರೋಜರ್ ಫೆಡರರ್ (ಸ್ವಿಡ್ಜರ್‍ಲ್ಯಾಂಡ್ 5,770 ಪಾಯಿಂಟ್ಸ್)
ಡೊಮಿನಿಕ್ ಥಿಮೇ (ಆಸ್ಟ್ರೇಲಿಯ, 4,845 ಪಾಯಿಂಟ್ಸ್)
ಅಲೆಕ್ಸಾಂಡರ್ ಜಿವಿರೇವ್ (ಜರ್ಮನಿ, 4,745 ಪಾಯಿಂಟ್ಸ್)
ಕಿ ನಿಶಿಕೋರಿ (ಜಪಾನ್, 3,860 ಪಾಯಿಂಟ್ಸ್)
ಸ್ಟೆಫಾನೋಸ್ ಟಿಸಿಟಿಸಿಪಾಸ್ (ಜರ್ಮನಿ, 3790 ಪಾಯಿಂಟ್ಸ್)
ಕೆವಿನ್ ಅಂಡರ್‍ಸನ್ (ರಷ್ಯಾ, 3755 ಪಾಯಿಂಟ್ಸ್)
ಜುನ್ ಮಾರ್ಟಿನ್ ಡೇಲ್ ಪಾರ್ಟೊ (ಅಜೆಂಟೇನಾ, 3,145 ಪಾಯಿಂಟ್ಸ್)
ಮಾರ್ಲಿನ್ ಸಿಲಿಕ್ (ಕೊರೆಷಿಯಾ 3,025)

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ