ಪೊಲೀಸ್ ಠಾಣೆಗಳ ಮೇಲಿನ ದಾಳಿಗೆ ಶಿಸ್ತುಕ್ರಮ ಕಾರಣವಾಯಿತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಸ್ಥಳೀಯರು ದಾಳಿ ನಡೆಸಲು ಕಾರಣವಾಯಿತೇ ಲಾಕ್‍ಡೌನ್ ಶಿಸ್ತುಕ್ರಮ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅತಿ ಹೆಚ್ಚು ಜನಸಂದಣಿ ಹಾಗೂ ಕಿರಿದಾದ ರಸ್ತೆಗಳು ಮತ್ತು ಮನೆಗಳನ್ನು ಹೊಂದಿರುವ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯ ಜನ ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸರು ಕೈಗೊಂಡ ಶಿಸ್ತುಕ್ರಮದಿಂದ ಬೇಸತ್ತಿದ್ದರು ಎನ್ನಲಾಗಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಬೀದಿಗಿಳಿದ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಲಾಕ್‍ಡೌನ್ ತೆರವಿನ ನಂತರ ಸೀಜ್ ಆದ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳಲು ಸ್ಥಳೀಯರು ಹರಸಾಹಸ ಪಟ್ಟಿದ್ದರು.

ಪೆÇಲೀಸರು ಕೇಳಿದ ದಾಖಲೆ ನೀಡಲು ಸಾಧ್ಯವಾಗದೆ ವಾಹನ ಬಿಡಿಸಿಕೊಳ್ಳಲು ಆಗದೆ ಜನ ರೋಸಿ ಹೋಗಿದ್ದರು. ಈ ಎರಡೂ ಪ್ರದೇಶಗಳಲ್ಲಿ ಕೂಲಿ ಕೆಲಸ ಮಾಡುವವರು, ಸಣ್ಣ ವ್ಯಾಪಾರಿಗಳೇ ಹೆಚ್ಚು. ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರಿಗೇನೂ ಕಡಿಮೆ ಇಲ್ಲ.

ಇಂತಹ ಜನ ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸರ ಶಿಸ್ತುಕ್ರಮದಿಂದ ವ್ಯಾಪಾರ ಮಾಡದೆ ಪರದಾಡಿದ್ದರು. ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಲು ಪೊಲೀಸರೇ ಕಾರಣ ಎಂಬ ಭಾವನೆ ಸ್ಥಳೀಯರಲ್ಲಿ ಮನೆ ಮಾಡಿತ್ತು.

ಲಾಕ್‍ಡೌನ್ ನಿಯಮ ಹಾಗೂ ಸೀಜ್ ಆದ ವಾಹನಗಳನ್ನು ಬಿಡಿಸಿಕೊಳ್ಳಲು ಆಗದೆ ಪೊಲೀಸರ ವಿರುದ್ಧ ಹಲ್ಲು ಮಸೆಯುತ್ತಿದ್ದ ಸ್ಥಳೀಯರಿಗೆ ಆ ಒಂದು ಸಂಘಟನೆಯ ಕುಮ್ಮಕ್ಕು ಪ್ರೇರೇಪಣೆ ನೀಡಿತ್ತು. ಅದ್ಯಾವ ವ್ಯಕ್ತಿಯೋ ಧರ್ಮವೊಂದಕ್ಕೆ ಸಂಬಂಸಿದ ಪೋಸ್ಟ್ ಮಾಡಿದ್ದನ್ನೇ ದೊಡ್ಡದು ಮಾಡಿದ ಸಂಘಟನೆಯೊಂದು ಗಲಭೆ ಸೃಷ್ಟಿಸಲು ಸಂಚು ರೂಪಿಸಿತ್ತು.

ಸಂಘಟನೆಯಿಂದ ಪ್ರೇರೇಪಿತಗೊಂಡ ಕೆಲವು ಸ್ಥಳೀಯರು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ತೆರಳಿ ದಾಂಧಲೆ ನಡೆಸಿದ ನಂತರ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಲಾಕ್‍ಡೌನ್ ಸಂದರ್ಭದ ಪೊಲೀಸರ ಶಿಸ್ತುಕ್ರಮ ನೆನಪಾಗಿದೆ.

ಪೊಲೀಸರ ಶಿಸ್ತುಕ್ರಮ ಹಾಗೂ ದಾಖಲೆ ಪಡೆದು ತಮ್ಮ ವಾಹನ ಬಿಡಲು ಪೊಲೀಸರು ಸತಾಯಿಸಿದ್ದನ್ನೇ ನೆನಪು ಮಾಡಿಕೊಂಡು ಸ್ಥಳೀಯರು ಏಕಾಏಕಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಸಿಕ್ಕ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿ ಠಾಣೆ ಮುಂದಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

# ಬಿಸಿ ಮುಟ್ಟಿಸಿದರೆ ಹೀಗಾಗುತ್ತಿರಲಿಲ್ಲ:
ಜೆಜೆ ನಗರದ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಿ ಇಡೀ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಪೊಲೀಸರ ಶಿಸ್ತುಕ್ರಮವನ್ನು ವಿರೋಸಿ ಸುಮಾರು 15ಕ್ಕೂ ಹೆಚ್ಚು ಮಂದಿ ಪೊಲೀಸರು ಹಾಗೂ ಕೊರೊನಾ ವಾರಿಯರ್ಸ್‍ಗಳ ಮೇಲೆ ಹಲ್ಲೆ ನಡೆಸಿ ಧಮ್ಕಿ ಹಾಕಿದ್ದರು.

ಆಗ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡಿರಲಿಲ್ಲ. ಇದರ ಜತೆಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಅವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರುವಾಗ ಯುದ್ಧ ಗೆದ್ದವರಂತೆ ತಮ್ಮ ಬೆಂಬಲಿಗರೊಂದಿಗೆ ಪಾದರಾಯನಪುರದವರೆಗೂ ವಿಜಯಯಾತ್ರೆ ನಡೆಸಿದ್ದರು.

ಅವರ ಈ ಧೋರಣೆಯಿಂದ ಹಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಿಯಮ ಉಲ್ಲಂಘಿಸಿದ ಪಾಷಾ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಂಡಿರಲಿಲ್ಲ.

ಈ ಎರಡೂ ಪ್ರಕರಣಗಳ ಸಂದರ್ಭದಲ್ಲಿ ಕಿಡಿಗೇಡಿಗಳಿಗೆ ಪೆÇಲೀಸರು ಬಿಸಿ ಮುಟ್ಟಿಸಿದ್ದರೆ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯ ಪೊಲೀಸ್ ಠಾಣೆಗಳ ಮೇಲೆ ಗಲಭೆಕೋರರು ದಾಂಧಲೆ ನಡೆಸಲು ಮುಂದಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Facebook Comments

Sri Raghav

Admin