ಪಾಕ್‌ನಲ್ಲಿ ಹಿಂದೂ ದೇವಸ್ಥಾನ ಮೇಲೆ ದಾಳಿ : 20 ಮಂದಿ ಬಂಧನ, 150 ಮಂದಿ ವಿರುದ್ಧ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ಲಾಹೋರ್, ಆ.7- ಹಿಂದು ದೇವಸ್ಥಾನದ ಮೇಲೆ ದಾಳಿ ನಡೆಸಿ ಪ್ರತಿಮೆಗಳನ್ನು ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 150 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, 20 ಮಂದಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹಿಮ್ಯಾರ್ ಖಾನ್ ಜಿಲ್ಲೆಯ ಬೋಂಗ್ ಪ್ರದೇಶದಲ್ಲಿ ಗುಂಪೊಂದು ಹಿಂದು ಸಂಸ್ಕøತಿಯ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದು, ದೊಣ್ಣೆ, ಲಾಠಿಗಳು ಹಾಗೂ ಕಲ್ಲುಗಳನ್ನು ಬಳಸಿ ಅಲ್ಲಿನ ಪ್ರತಿಮೆಗಳನ್ನು ಧ್ವಂಸಗೊಳಿಸಿತ್ತು.

ಎಂಟು ವರ್ಷದ ಬಾಲ ಆರೋಪಿಯನ್ನು ಬಂಧಿಸಲಾಗಿತ್ತು, ನ್ಯಾಯಾಲಯ ಆ ಬಾಲಕನ್ನು ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಭಾಂಗ್ ಪ್ರಾಂತ್ಯದಲ್ಲಿ ಪ್ರತಿಭಟನಾರ್ಥ ದೇವಸ್ಥಾನದ ಮೇಲೆ ದಾಳಿ ನಡೆಸಲಾಗಿತ್ತು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಗುಲ್ಜರ್ ಅಹಮದ್ ಅವರು ಘಟನೆ ಬಗ್ಗೆ ಆಘಾತ ವ್ಯಕ್ತ ಪಡಿಸಿದರು.

ಪೊಲೀಸರು ದೇವಸ್ಥಾನಕ್ಕೆ ರಕ್ಷಣೆ ನೀಡಲು ವಿಫಲರಾಗಿದ್ದಾರೆ. ಘಟನೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್‍ನ ಗೌರವಕ್ಕೆ ಧಕ್ಕೆ ಬರಲಿದೆ ಎಂದು ವ್ಯಾಖ್ಯಾನಿಸಿತ್ತು. ಮುಂದಿನ ವಿಚಾರಣೆಯನ್ನು ಆಗಸ್ಟ್ 13ಕ್ಕೆ ನಿಗದಿ ಮಾಡಲಾಗಿದೆ.

ನ್ಯಾಯಾಲಯದ ಆದೇಶ ಆಧರಿಸಿ ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಪಾಕಿಸ್ತಾನದ ಕಾನೂನಿನ ಅನ್ವಯ ದೇಶದ್ರೋಹ ಹಾಗೂ ಇತರ ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ರಹಿಮ್ ಯಾರ್ ಖಾನ್ ಅಸದ್ ಸಫ್ರ್ಜ್ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಶಂಕಿತನನ್ನು ಘಟನೆಯ ದೃಶ್ಯಾವಳಿಗನ್ನು ಆಧರಿಸಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Facebook Comments