ಕೊಡಲಿಯಿಂದ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಆರೋಪಿ ಪೊಲೀಸರ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ಕಿತ್ತೂರು ತಾಲೂಕಿನ ವೀರಾಪುರ ಗ್ರಾಮದ ಪತ್ರಕರ್ತನ ಮೇಲೆ ಗೂಂಡಾಗಿರಿ ಮಾಡಿ ಕೊಡಲಿಯಿಂದ ತಲೆ ಹೊಡೆದ ಘಟನೆ ತಡರಾತ್ರಿ‌ ನಡೆದಿದೆ. ಖಾಸಗಿ ವಾಹಿನಿಯ ಪತ್ರಕರ್ತ ಬಸವರಾಜು ಹಲ್ಲೆಗೊಳ್ಳಗಾಗಿದ್ದಾನೆ.

ಅದೇ ಗ್ರಾಮದ ರಾಯಪ್ಪ ಎಂಬ ವ್ಯಕ್ತಿಯಿಂದ ಬಸವರಾಜು ಮೇಲೆ ಹಲ್ಲೆ ನಡೆದಿದೆ. ರಾಯಪ್ಪ ಊರಲ್ಲಿ ಗೂಂಡಾಗಿರಿ‌ ಮಾಡುತ್ತಿದ್ದರಿಂದ ಬಸವರಾಜು ಪೊಲೀಸರ ಗಮನಕ್ಕೆ ತಂದಿದ್ದ ಈ ಘಟನೆಗೆ ವಿಷಯ ಕಾರಣ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ತಡರಾತ್ರಿ ಹಲ್ಲೆಗೊಳ್ಳಗಾದ. ಪತ್ರಕರ್ತರನ್ನು ಇದೀಗ ಬೆಳಗಾವಿ‌ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಕಿತ್ತೂರು ಪೊಲೀಸರು ಹಲ್ಲೆ ಮಾಡಿದ ರಾಯಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆ ಬಗ್ಗೆ ಬೆಳಗಾವಿ ಜಿಲ್ಲಾ ಪತ್ರಕರ್ತರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ‌. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin