ವಿಶ್ವಸಂಸ್ಥೆ ಹೆಲಿಕಾಪ್ಟರ್ ಮೇಲೆ ಉಗ್ರರ ಗುಂಡಿನ ದಾಳಿ : ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಡಕರ್, ಜು.6- ಹಿಂಸಾಚಾರದಿಂದ ನಲುಗುತ್ತಿರುವ ನೈಜೀರಿಯದ ಈಶಾನ್ಯ ಭಾಗದಲ್ಲಿ ಕ್ರೂರಿ ಬೋಕೋ ಹರಂ ಉಗ್ರಗಾಮಿಗಳ ಅಟ್ಟಹಾಸ ಮರುಕಳಿಸಿದೆ. ವಿಶ್ವಸಂಸ್ಥೆಯ ನೆರವು ಹೆಲಿಕಾಪ್ಟರ್ ಮೇಲೆ ಗುಂಡಿನ ದಾಳಿ ನಡೆಸಿದ ಇಸ್ಲಾಮಿಕ್ ಉಗ್ರರು ಇಬ್ಬರನ್ನು ಕೊಂದು ಕೆಲವರನ್ನು ಗಾಯಗೊಳಿಸಿದ್ದಾರೆ.

ನೈಜೀರಿಯದಲ್ಲಿ ವಿಶ್ವಸಂಸ್ಥೆಯ ಮಾನವೀಯ ನೆರವು ಪಡೆಗಳ ಮೇಲೆ ಬೋಕೋ ಹರಂ ಉಗ್ರರ ದಾಳಿ ಪ್ರಕರಣಗಳು ಮುಂದುವರಿದಿದ್ದು, ನಾಗರಿಕರನ್ನೂ ಸಹ ನಿರ್ದಯವಾಗಿ ಕೊಲ್ಲುತ್ತಿದ್ದಾರೆ.

ಭಾನುವಾರ ಸಂಜೆ ಯುಎನ್ ಏಡ್ ಹೆಲಿಕಾಪ್ಟರ್ ಮೇಲೆ ಇಸ್ಲಾಮಿಕ್ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆಯನ್ನು ಮಹಮದು ಬುಹಾರಿ ಖಂಡಿಸಿದ್ದಾರೆ. ಹಂತಕ ಆತಂಕವಾದಿಗಳು ಗಂಭೀರ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನೈಜೀರಿಯಾದ ಈಶಾನ್ಯ ಭಾಗದಲ್ಲಿ ಬೋಕೋ ಹರಂ ಉಗ್ರಗಾಮಿಗಳ ಹಾವಳಿಯಿಂದ ಈವರೆಗ 1.9 ದಶಲಕ್ಷ ಮಂದಿ ನಿರಾಶ್ರಿತರಾಗಿದ್ದು, 30 ಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ನರಳುವಂತಾಗಿದೆ.

Facebook Comments