ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಯತ್ನಿಸಿದ್ದ ಆರೋಪಿಗಳು 24 ಗಂಟೆಯೊಳಗೆ ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡು ಹಾರಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರನ್ನು ಕೆ.ಆರ್.ಪುರಂ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಸಿದ್ದಾರೆ. ಕೆ.ಆರ್.ಪುರಂನ ಮೊಹಮ್ಮದ್ ಸುಹೇಲ್ ಪಾಷ ಅಲಿಯಾಸ್ ಸುಹೇಲ್ ಅಲಿಯಾಸ್ ಕಾಲು(23) ಮತ್ತು ಶೋಹೆಬ್ ಅಲಿಯಾಸ್ ಶೋಬ್(19) ಬಂತ ಆರೋಪಿಗಳು.

ಬಂತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಪಿಸ್ತೂಲು ಮತ್ತು ಮಚ್ಚನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ಆರೋಪಿ ಸುಹೇಲ್ ಪಾಷ ಮತ್ತು ಸ್ನೇಹಿತ ಮಿರ್ಜಾ ಖಾನ್ ನಡೆಸುತ್ತಿದ್ದ ಸಮೋಸ ಅಂಗಡಿ ಬಳಿ ಸೇರುತ್ತಿದ್ದ ಜನರ ವಿಚಾರವಾಗಿ ರಿಯಲ್ ಎಸ್ಟೇಟ್ ಉದ್ಯಮಿ ಬಾಬು ಹಾಗೂ ಮೊಹಮ್ಮದ್ ಸುಹೇಲ್ ಪಾಷ ನಡುವೆ ಗಲಾಟೆಯಾಗಿತ್ತು.

ಈ ಘಟನೆಯಿಂದ ಆರೋಪಿ ಸುಹೇಲ್ ಪಾಷನಿಗೆ ಆಟೋ ಬಾಬು ಅವರ ಮೇಲೆ ದ್ವೇಷವಿತ್ತು. ಬಾಬು ಮೇಲೆ ಹಲ್ಲೆ ಮಾಡಬೇಕೆಂದು ಸ್ನೇಹಿತ ಮಿರ್ಜಾ ಖಾನ್‍ನೊಂದಿಗೆ ಸುಹೇಲ್ ಚರ್ಚಿಸಿದ್ದ. ಗಣೇಶ ಹಬ್ಬದಂದು ಸುಹೇಲ್ ಪಾಷನನ್ನು ಹೊಡೆಯುತ್ತೇನೆಂದು ಆಟೋ ಬಾಬು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿರುವ ಬಗ್ಗೆ ಸ್ನೇಹಿತರಿಂದ ಪಾಷ ತಿಳಿದುಕೊಂಡಿದ್ದ.

ತನ್ನನ್ನು ಹೊಡೆಯುವ ಮುಂಚೆ ತಾನೇ ಮೊದಲು ಬಾಬುವನ್ನು ಹೊಡೆಯಬೇಕೆಂದು ಸುಹೇಲ್ ಪಾಷ ಯೋಚಿಸಿ ಬಾಬುವಿನಿಂದ ಹಲ್ಲೆಗೊಳಗಾದ ಮತ್ತೊಬ್ಬ ಸ್ನೇಹಿತ ಶೋಹೆಬ್‍ನನ್ನು ತನ್ನ ಜೊತೆ ಕರೆದುಕೊಂಡಿದ್ದನು. ಅದರಂತೆ ರಾತ್ರಿ 9.15ರ ಸುಮಾರಿನಲ್ಲಿ ಬಾಬು ತಮ್ಮ ಕಚೇರಿಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ ಆರೋಪಿ ಶೋಹೆಬ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ.

ನಂತರ ಸುಹೇಲ್‍ನೂ ಬಾಬು ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದನು. ಆರೋಪಿಗಳನ್ನು ಬಂಸಲು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅವರ ಮಾರ್ಗದರ್ಶನದಲ್ಲಿ ಎಸಿಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಆರೋಪಿಗಳು ಬಳಸಿದ್ದ ಸಿಮ್, ಕಾಲ್ ಡೀಟೇಲ್ಸ್ ಮತ್ತು ಟವರ್ ಲೊಕೇಶನ್ ಆಧಾರದಿಂದ ಆರೋಪಿಗಳ ಪತ್ತೆ ಕಾರ್ಯೋನ್ಮುಖವಾದವು. ಆರೋಪಿಗಳು ಮಂಡ್ಯ ಜಿಲ್ಲೆಯ ಶಿವನಸಮುದ್ರದಲ್ಲಿ ಇರುವ ಮಾಹಿತಿಯನ್ನು ಖಚಿತಪಡಿಸಿಕೊಂಡ ತಂಡ ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಮಾಡಿ ಬಂಸುವಲ್ಲಿ ಯಶಸ್ವಿಯಾಗಿವೆ.

ಆರೋಪಿ ಮೊಹಮ್ಮದ್ ಸುಹೇಲ್ ಪಾಷ ಹಲಸೂರಿನಲ್ಲಿರುವ ಎಂಬಿಐ ಇನ್‍ಸ್ಟಿಟ್ಯೂಟ್‍ನಲ್ಲಿ ಎಸಿ ಟೆಕ್ನಿಷಿಯನ್ ಎಂಆರ್‍ಐಸಿ ವ್ಯಾಸಂಗ ಮಾಡಿ ಅರ್ಧಕ್ಕೆ ವ್ಯಾಸಂಗ ಬಿಟ್ಟು ತಂದೆ ಖಲೀಂ ಪಾಷರೊಂದಿಗೆ ತರಕಾರಿ ವ್ಯಾಪಾರ ಮಾಡುತ್ತಿದ್ದಾನೆ.

ಹಲ್ಲೆಗೊಳಗಾದ ಬಾಬು ಅಲಿಯಾಸ್ ಬಿಲ್ಲಾ ಕೂಡ ಅದೇ ಬೀದಿಯಲ್ಲಿ ವಕ್ಸಾನಾ ಗ್ರೂಪ್ ಎಂಬ ಹೆಸರಿನ ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಕಚೇರಿಯನ್ನು ನಡೆಸುತ್ತಿದ್ದರು.

ಮೂರು ವರ್ಷಗಳ ಹಿಂದೆ ಡಿಸೆಂಬರ್ 31ರ ರಾತ್ರಿ ಆರೋಪಿ ಸುಹೇಲ್ ಪಾಷ ಮತ್ತು ಆತನ ಸ್ನೇಹಿತರು ಹೊಸ ವರ್ಷ ಆಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬಾಬು ಮತ್ತು ಸುಹೇಲ್ ಪಾಷ ನಡುವೆ ಗಲಾಟೆಯಾಗಿತ್ತು.

ಎರಡು ವರ್ಷದ ಹಿಂದೆ ಸುಹೇಲ್ ಪಾಷ ತಮ್ಮ ಸೋದರನೊಂದಿಗೆ ಬರುತ್ತಿದ್ದಾಗ ಬಾಬು ಇವರನ್ನು ಅಡ್ಡಗಟ್ಟಿ ಸುಹೇಲ್ ಪಾಷನಿಗೆ ಬೆದರಿಕೆ ಹಾಕಿದ್ದನು. ಈ ದ್ವೇಷದಿಂದ ಸುಹೇಲ್ ಪಾಷ ಬಾಬು ಮೇಲೆ ದ್ವೇಷ ಸಾದಿಸುತ್ತಿದ್ದನು. ಕೆ.ಆರ್.ಪುರಂ ಠಾಣೆ ಪೊಲೀಸರ ಕಾರ್ಯ ವೈಖರಿಯನ್ನು ಹಿರಿಯ ಪೊಲೀಸ್ ಅಕಾರಿಗಳು ಶ್ಲಾಘಿಸಿದ್ದಾರೆ.

Facebook Comments

Sri Raghav

Admin