ಮದುವೆಗೆ ಪೋಷಕರ ವಿರೋಧ, ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.9- ಮದುವೆಗೆ ಪೋಷಕರು ನಿರಾಕರಿಸಿದ್ದರಿಂದ ಬೇಸತ್ತ ಪ್ರೇಮಿಗಳು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡಿನ ದುಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ. ದುಗ್ಗಹಳ್ಳಿಯ ಪ್ರೇಮಿ ಹಾಗೂ ಕುರಿಹುಂಡಿಯ ಪ್ರಿಯಕರನೊಬ್ಬ ಬಹಳ ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರಿಂದ ಇಬ್ಪರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು, ಆದರೆ ಇಬ್ಬರು ಅನ್ಯ ಸಮುದಾಯಕ್ಕೆ ಸೇರಿದ್ದರಿಂದ ಪೋಷಕರು ಮದುವೆಗೆ ನಿರಾಕರಿಸಿದ್ದರು.

ಇದರಿಂದ ಬೇಸತ್ತ ಪ್ರಿಯಕರ, ದುಗ್ಗಹಳ್ಳಿಯ ಪ್ರಿಯತಮೆಯ ಮನೆಗೆ ಬಂದಿದ್ದಾನೆ, ಈ ವೇಳೆ ಇಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಸ್ಥಳೀಯರು ಇವರಿಬ್ಬರನ್ನು ಚಿಕಿತ್ಸೆಗೆ ದಾಖಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸ್ಥಳೀಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments