ಅಬಕಾರಿ ವಿಚಕ್ಷಣದಳದ ಕಾರ್ಯಾಚರಣೆ : 60 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಈ ಸುದ್ದಿಯನ್ನು ಶೇರ್ ಮಾಡಿ

arrested-1

ಬೆಂಗಳೂರು, ಸೆ.4- ರಾಜ್ಯ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಿ 60 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಆಯುಕ್ತ ವೈ.ಯಶವಂತ್ ನಿರ್ದೇಶನದಲ್ಲಿ ಅಬಕಾರಿ ಜಂಟಿ ಆಯುಕ್ತ ಎಸ್.ಎಲ್.ರಾಜೇಂದ್ರ ಪ್ರಸಾದ್ ಮಾರ್ಗದರ್ಶದಲ್ಲಿ ಅಬಕಾರಿ ಇಲಾಖೆಯ ರಾಜ್ಯ ವಿಚಕ್ಷಣ ದಳದ ಸಿಬ್ಬಂದಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ 18 ಗಂಭೀರ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭದಲ್ಲಿ ಬಸ್ಸು ಒಳಗೊಂಡಂತೆ 10 ವಾಹನಗಳನ್ನು ವಶಪಡಿಸಿಕೊಂಡು 175.240 ಕೆಜಿ ಒಣ ಹಾಗೂ ಹಸಿ ಗಾಂಜಾ, 16 ಲೀ ಗೋವಾ ಮದ್ಯ ಮತ್ತು ಬಿಯರ್, 112 ಲೀ ಸೇಂದಿ, ನೀರು, 3 ಲೀ ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದರಿ ಎಲ್ಲಾ ಪ್ರಕರಣಗಳಲ್ಲಿ ಮುಂದಿನ ತನಿಖೆ ಪ್ರಗತಿಯಲ್ಲಿದೆ.

Facebook Comments

Sri Raghav

Admin