ಆಸ್ಟ್ರೇಲಿಯಾದಲ್ಲಿ 3ನೇ ಓಮಿಕ್ರಾನ್ ಕೇಸ್ ಪತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಕ್ಯಾನ್‍ಬೆರಾ, ನ.29- ಆಸ್ಟ್ರೇಲಿಯಾದಲ್ಲಿ ಓಮಿಕ್ರಾನ್ ಕೋವಿಡ್ ರೂಪಾಂತರಿ ಸೋಂಕಿನ ಮೂರನೇ ಪ್ರಕರಣ ದೃಢಪಟ್ಟಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದರಿಂದ ಈ ವಾರದಲ್ಲಿ ನಿರ್ಬಂಧಗಳನ್ನು ಸಡಿಲಿಸುವ ಯೋಜನೆಯನ್ನು ಸರ್ಕಾರವು ಮರುಪರಿಶೀಲನೆ ಮಾಡುವಂತಾಗಿದೆ.

ಕಳೆದ ಗುರುವಾರ ಜೋಹಾನ್ಸ್‍ಬರ್ಗ್‍ನಿಂದ ಉತ್ತರ ಆಸ್ಟ್ರೇಲಿಯಾದ ಡಾರ್ಲಿನ್ ನಗರಕ್ಕೆ ಪ್ರಯಾಣಿಸಿದ 30ರ ಆಸುಪಾಸಿನ ದಕ್ಷಿಣ ಆಫ್ರಿಕಾದ ಓರ್ವ ವ್ಯಕ್ತಿಗೆ ಓಮಿಕ್ರಾನ್ ಆಸ್ಟ್ರೇಲಿಯಾದ ಅತ್ಯಂತ ಸುರಕ್ಷಿತ ಕ್ವಾರಂಟೈನ್ ಕೇಂದ್ರದಲ್ಲಿ ದೃಢಪಟ್ಟಿತು ಎಂದು ಉತ್ತರ ಪ್ರಾಂತ್ಯದ ಆರೋಗ್ಯ ಸಚಿವೆ ನತಾಶಾ ಪೈಲ್ಸ್ ತಿಳಿಸಿದ್ದಾರೆ.

ದ.ಆಫ್ರಿಖಾದಿಂದ ಸಿಡ್ನಿಗೆ ಬಂದ ಇಬ್ಬರು ಪ್ರಯಾಣಿಕರು ಆಸ್ಟ್ರೇಲಿಯಾದ ಮೊದಲ ಓಮಿಕ್ರಾನ್ ಸೋಂಕಿತರಾಗಿದ್ದಾರೆ ಎಂದು ಭಾನುವಾರನ್ಯೂಸೌತ್ ವೇಲ್ಸ್‍ನ ಸರ್ಕಾರಿ ಅಕಾರಿಗಳು ಮಾಹಿತಿ ನೀಡಿದ್ದರು. ಇವರಿಬ್ಬರೂ ಪೂರ್ಣವಾಗಿ ಲಸಿಕೆ ಪಡೆದವರಾಗಿದ್ದು, ಯಾವುದೇ ಸೋಂಕಿನ ಲಕ್ಷಣಗಳಿಲ್ಲದೆ ಸಿಡ್ನಿಯಲ್ಲಿ ಕ್ವಾರಂಟೈನ್‍ನಲ್ಲಿದ್ದರು.

Facebook Comments

Sri Raghav

Admin