ಆಸ್ಟ್ರೇಲಿಯಾ ಸರಣಿಯಿಂದ ರೋಹಿತ್, ಇಶಾಂತ್ ಔಟ್..!
ಸಿಡ್ನಿ, ನ. 24- ಆಸ್ಟ್ರೇಲಿಯಾ ವಿರುದ್ಧ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾಗೆ ಭಾರೀ ಹೊಡೆತ ಬಿದ್ದಿದೆ.
ಐಪಿಎಲ್ ವೇಳೆ ಗಾಯಗೊಂಡಿದ್ದ ಮುಂಬೈ ಇಂಡಿಯನ್ಸ್ನ ನಾಯಕ ರೋಹಿತ್ ಶರ್ಮಾ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸರಣಿಯಿಂದ ಹೊರಬಿದ್ದಿದ್ದು ಟೆಸ್À್ಟ ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಭಾರತ ತಂಡದ ಬಲವನ್ನು ಹೆಚ್ಚಿಸುವ ಸೂಚನೆ ನೀಡಿದ್ದರಾದರೂ ಬೆಂಗಳೂರಿನ ಎನ್ಸಿಎ ಫಿಟ್ನೆಸ್ ಸೆಂಟರ್ನಲ್ಲಿ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಬಳಿ ತರಬೇತಿ ಪಡೆಯುತ್ತಿರುವ ರೋಹಿತ್ ಶರ್ಮಾ ಇನ್ನು ಪೂರ್ಣ ಫಿಟ್ನೆಸ್ ಆಗದಿರುವುದರಿಂದ ಆಸ್ಟ್ರೇಲಿಯಾ ಸರಣಿಯಿಂದ ಅವರು ಬಹುತೇಕ ಹೊರಬೀಳುವ ಮೂಲಕ ಭಾರತ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ.
ಇನ್ನು ವೇಗಿ ಇಶಾಂತ್ ಶರ್ಮಾ ಕೂಡ ಬೆನ್ನು ನೋವಿನಿಂದ ಬಳಲುತ್ತಿರುವುದರಿಂದ ಅವರ ಅನುಪಸ್ಥಿತಿಯು ಭಾರತ ತಂಡವನ್ನು ತುಂಬಾ ಕಾಡಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡದ ನಿರ್ವಹಣೆ ತೀರಾ ಕಳಪೆಯಾಗಿದ್ದರೂ ಕಳೆದ ಬಾರಿಯ ಸರಣಿ ಜಯಿಸಿರುವ ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾ ಈ ಬಾರಿಯೂ ಏಕದಿನ, ಟ್ವೆಂಟಿ-20 , ಟೆಸ್ಟ್ ಸರಣಿಗಳನ್ನು ಗೆದ್ದು ಬೀಗುವ ಹುಮ್ಮಸ್ಸಿನಲ್ಲಿತ್ತಾದರೂ ಈಗ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಇಶಾಂತ್ ಶರ್ಮಾ ಹೊರಗುಳಿದಿರುವುದರಿಂದ ತಂಡದ ಮೇಲೆ ಪರಿಣಾಮ ಬೀರಿದೆ.
ಅಲ್ಲದೆ ಮೊದಲ ಟೆಸ್ಟ್ನ ನಂತರ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇಲೆ ತವರಿಗೆ ಹಿಂದುರಿಗುವುದರಿಂದ ಅವರ ಅನುಪಸ್ಥಿತಿಯು ತಂಡಕ್ಕೆ ತುಂಬಾ ಹೊರೆ ಆಗುವುದರಿಂದ ಈಗಾಗಲೇ ಆಸ್ಟ್ರೇಲಿಯಾ ತಂಡವು ಟೆಸ್ಟ್ ಸರಣಿಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ ಈಗ ಅವರು ಸರಣಿಯಿಂದ ಹೊರಗುಳಿದಿರುವುದರಿಂದ ಉಪನಾಯಕ ಅಜೆಂಕಾ ರಹಾನೆ ನಾಯಕ ಹಾಗೂ ಏಕದಿನದ ಉಪನಾಯಕ ಕೆ.ಎಲ್.ರಾಹುಲ್ಗೆ ಉಪನಾಯಕ ಪಟ್ಟ ಲಭಿಸಲಿದೆ. ರೋಹಿತ್ ಶರ್ಮಾ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ನ ನಾಯಕ ಶ್ರೇಯಾಸ್ ಅಯ್ಯರ್ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 17ರಿಂದ ಆರಂಭವಾಗಲಿದ್ದು ಭಾರತ ತಂಡವು ವಿದೇಶ ನೆಲದಲ್ಲಿ ಮೊದಲ ಬಾರಿಗೆ ಪಿಂಕ್ ಬಾಲ್ನೊಂದಿಗೆ ಹೊನಲು ಬೆಳಕಿನ ಪಂದ್ಯ ಆಡಲಿದ್ದು ಈ ಪಂದ್ಯವು ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ.
ಮೆಲ್ಬೋರ್ನ್ನಲ್ಲಿ ಡಿಸೆಂಬರ್ 26 ರಿಂದ 30ರವರೆಗೆ 2ನೇ ಟೆಸ್ಟ್, ಸಿಡ್ನಿಯಲ್ಲಿ ಜನವರಿ 7 ರಿಂದ 11ರವರೆಗೆ 3ನೇ ಟೆಸ್ಟ್ , ಬ್ರಿಸ್ಬೇನ್ನಲ್ಲಿ ಜನವರಿ 15 ರಿಂದ 19ರವರೆಗೆ ಅಂತಿಮ ಟೆಸ್ಟ್ ನಡೆಯಲಿದ್ದು, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಜರುಗಲಿರುವ ಪಂದ್ಯಗಳು ಬೆಳಗ್ಗೆ 5ಕ್ಕೆ ಆರಂಭಗೊಂಡರೆ, ಬ್ರಿಸ್ಬೇನ್ ಟೆಸ್ಟ್ 5.30ಕ್ಕೆ ಆರಂಭಗೊಳ್ಳಲಿದೆ.