ಸೆಮಿಫೈನಲ್ ಹಾದಿ ಸುಗಮವಾಗಿಸಿಕೊಳ್ಳಲು ಆಸ್ಟ್ರೇಲಿಯಾ, ಶ್ರೀಲಂಕಾ ಪೈಪೋಟಿ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಅ. 28- ಆಡಿರುವ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ಸಾಸಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡದ ಆಟಗಾರರು ಸೆಮಿಫೈನಲ್‍ಗೇರುವ ಲೆಕ್ಕಾಚಾರದಲ್ಲಿ ಮುಳುಗಿವೆ. ಆಸ್ಟ್ರೇಲಿಯಾವು ಮೊದಲ ಪಂದ್ಯದಲ್ಲೇ ವಿಶ್ವಕಪ್‍ನ ಚೋಕರ್ಸ್ ಎಂಬ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಸಿ ಶುಭಾರಂಭ ಮಾಡಿದರೆ ಶ್ರೀಲಂಕಾ ತಂಡವು ಬಾಂಗ್ಲಾದೇಶದ ವಿರುದ್ಧ ಜಯಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಕೊಂಡಿದೆ.

ಗ್ರೂಪ್ 1ರಲ್ಲಿ ಇಂಗ್ಲೆಂಡ್ ತಂಡವು ಈಗಾಗಲೇ ವೆಸ್ಟ್‍ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ಧ ಅಭೂತಪೂರ್ವ ಗೆಲುವು ಸಾಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದರೆ, ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಟಾಪ್ 2 ನೆ ಸ್ಥಾನವನ್ನು ಅಲಂಕರಿಸಲು ಆರೋನ್ ಫಿಂಚ್ ಸಾರಥ್ಯದ ಆಸ್ಟ್ರೇಲಿಯಾ ಹಾಗೂ ದುಸಾನ್ ಸನಕ ನಾಯಕತ್ವದ ಶ್ರೀಲಂಕಾ ತಂಡಗಳು ಸೆಣಸಾಟ ನಡೆಸಲಿದೆ.

ಆಸೀಸ್‍ಗೆ ಕೈ ಕೊಡುತ್ತಿರುವ ಬ್ಯಾಟ್ಸ್‍ಮನ್‍ಗಳು:
ಆಸ್ಟ್ರೇಲಿಯಾ ತಂಡವು ಟ್ವೆಂಟಿ- 20 ಸ್ಪೆಷಾಲಿಸ್ಟ್ ಬ್ಯಾಟ್ಸ್‍ಮನ್‍ಗಳನ್ನು ಹೊಂದಿದ್ದರೂ ಕೂಡ ನಾಯಕ ಆರೋನ್ ಫಿಂಚ್, ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಮಿಚಲ್ ಮಾರ್ಷ್ ಅವರು ಫಾರ್ಮ್‍ನಲ್ಲಿ ಇಲ್ಲದಿರುವುದು ದೊಡ್ಡ ತಲೆನೋವಾಗಿದ್ದರೂ ಕೂಡ ಸ್ಟೀವ್ ಸ್ಮಿತ್, ಮ್ಯಾಕ್ಸ್‍ವೆಲ್, ಸ್ಟೋನಿಸ್ ಉತ್ತಮ ಲಯದಲ್ಲಿರುವುದರಿಂದ ಆಸೀಸ್ ಇಂದಿನ ಪಂದ್ಯದಲ್ಲೂ ಬೃಹತ್ ಮೊತ್ತವನ್ನು ಕಲೆ ಹಾಕಬಹುದು ಎಂದು ಅಂದಾಜಿಸಲಾಗಿದೆ.

ಬೌಲರ್‍ಗಳ ದರ್ಬಾರ್:
ವೇಗ ಹಾಗೂ ಸ್ಪಿನ್ ಬೌಲರ್‍ಗಳನ್ನು ಒಳಗೊಂಡಿರುವ ಆಸ್ಟ್ರೇಲಿಯಾ ಪಡೆ ಎಂತಹ ಬಲಿಷ್ಠ ತಂಡಗಳ ಬ್ಯಾಟ್ಸ್‍ಮನ್‍ಗಳಿಗೂ ಲಗಾಮು ಹಾಕಬಹುದು. ಜೋಸ್ ಹೇಜಲ್‍ವುಡ್, ಪ್ಯಾಟ್ ಕಮ್ಮಿನ್ಸ್, ಮಿಚಲ್ ಸ್ಟ್ರಾಕ್‍ರ ವೇಗ ಹಾಗೂ ಆಡಂ ಜಂಪಾರ ಸ್ಪಿನ್ ಮೋಡಿಯಿಂದ ಲಂಕಾ ಬ್ಯಾಟ್ಸ್ ಮನ್‍ಗಳನ್ನು ಕಟ್ಟಿ ಹಾಕಿದರೆ ಆಸೀಸ್ ಸುಲಭವಾಗಿ ಗೆಲ್ಲಬಹುದು.

ಆಸೀಸ್‍ಗೆ ಬ್ರೇಕ್ ಹಾಕುವರೇ ಲಂಕಾ ಸಿಂಹಗಳು:
ಅನುಭವಿ ಆಟಗಾರರ ಕೊರತೆಯಿ ದ್ದರೂ ಕೂಡ ಬಾಂಗ್ಲಾದೇಶ ವಿರುದ್ಧ ಅಭೂತಪೂರ್ವ ಗೆಲುವು ಸಾಸಿರುವ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಸಲು ಸಜ್ಜಾಗಿದೆ. ವಿಶ್ವಕಪ್ ಕ್ರೀಡಾಕೂಟದಲ್ಲಿ ಲಂಕಾ ವಿರುದ್ಧ ಆಸ್ಟ್ರೇಲಿಯಾ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಸಾಸಿದರೂ ಕೂಡ ಇಂದಿನ ಪಂದ್ಯದಲ್ಲಿ ತಿರುಗೇಟು ನೀಡಲು ದುಸಾನ್ ಸನಕ ಸಾರಥ್ಯದ ಲಂಕಾ ಸಜ್ಜಾಗಿದ್ದು ಹಿಂದಿನ ಪಂದ್ಯದಲ್ಲಿ ರನ್‍ಗಳ ಸುರಿಮಳೆ ಸುರಿಸಿದ್ದ ಚರಿತ ಅಸಲಂಕಾ, ಭುವಂಕಾ ರಾಜಪಕ್ಷಾ, ಬೌಲರ್‍ಗಳಾದ ಚಮಿಕ ಕರುಣರತ್ನೆ, ಲಹಿರಿ ಕುಮಾರ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

Facebook Comments