ಆಸ್ಟ್ರೇಲಿಯಾಕ್ಕೆ 133 ರನ್‍ಗಳ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

ಬ್ರಿಜ್‍ಟೌನ್, ಜು. 21- ಆಸೀಸ್ ವೇಗಿ ಮಿಚಲ್ ಸ್ಟ್ರಾಕ್ (5ವಿಕೆಟ್)ರ ಮಾರಕ ಬೌಲಿಂಗ್‍ನಿಂದ ವೆಸ್ಟ್ ಇಂಡೀಸ್ ವಿರುದ್ಧ 133 ರನ್ ಗಳ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಾಯಕ ಅಲೆಕ್ಸ್ ಕ್ಯಾರಿ (67 ರನ್, 5 ಬೌಂಡರಿ, 2 ಸಿಕ್ಸರ್) ಹಾಗೂ ಅಸ್ಟನ್ ಟರ್ನರ್ (49 ರನ್, 2 ಬೌಂಡರಿ, 2 ಸಿಕ್ಸರ್) ಆಕ್ರಮಣಕಾರಿ ಆಟದಿಂದ ನಿಗಧಿತ 50 ಓವರ್‍ಗಳಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡು 252 ರನ್ ಗಳಿಸಿತು.

ವಿಂಡೀಸ್ ಪರ ಹೇಡನ್ ವಾಲ್ಷ್ ಅವರು 5 ವಿಕೆಟ್ ಕಬಳಿಸಿದರೆ, ಅಲ್ಜರಿ ಜೋಸೆಫ್ ಹಾಗೂ ಹುಸೇನ್ ತಲಾ 2 ವಿಕೆಟ್ ಕಬಳಿಸಿದರು.

# ವಿಂಡೀಸ್‍ಗೆ ಆಘಾತ:
ಆಸ್ಟ್ರೇಲಿಯಾ ನೀಡಿದ 253 ರನ್‍ಗಳ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಮಿಚಲ್ ಸ್ಟ್ರಾಕ್ ಹಾಗೂ ಜೋಸ್ ಹೇಜಲ್‍ವುಡ್ (3 ವಿಕೆಟ್)ರ ಬೌಲಿಂಗ್ ದಾಳಿಗೆ ನಲುಗಿ 27 ರನ್‍ಗಳಾಗುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತು.

ನಂತರ ನಾಯಕ ಕಿರಾನ್ ಫೋಲಾರ್ಡ್ (56 ರನ್, 5 ಬೌಂಡರಿ, 3 ಸಿಕ್ಸರ್)ರ ಅರ್ಧಶತಕದ ನೆರವಿದ್ದರೂ ಕೂಡ 123 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಹಿನ್ನೆಡೆ ಅನುಭವಿಸಿದೆ.

Facebook Comments