ಆಸ್ಟ್ರೇಲಿಯಾ ಬಾಸ್ಕೆಟ್‍ಬಾಲ್ ಲೀಗ್ ಮುಂದಿನ ವರ್ಷಕ್ಕೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ, ಸೆ.14- ಕೋವಿಡ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಇಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯನ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್ ಮುಂದೂಡಲಾಗಿದೆ.  ನ್ಯಾಷನಲ್ ಬ್ಯಾಡ್ಮಿಂಟನ್ ಲೀಗ್‍ನ ಕಾರ್ಯಕಾರಿ ಅಧ್ಯಕ್ಷ ಲ್ಯಾರಿ ಕಿಸ್ಟಿಮನ್ ಅವರು ಇಂದು ಮಾಧ್ಯಮಕ್ಕೆ ನೀಡಿರುವ ಪ್ರಕಟಣೆಯಲ್ಲಿ ಮುಂದಿನ 2021ರ ಜನವರಿಗೆ ಪಂದ್ಯಾವಳಿಯನ್ನು ಮುಂದೂಡಿರುವುದನ್ನು ಪ್ರಕಟಿಸಿದ್ದಾರೆ.

ದೇಶದ ವಿವಿಧೆಡೆಗಳಲ್ಲದೆ ವಿದೇಶಿ ಆಟಗಾರರು ಕೂಡ ವಿಶ್ವದ ವಿವಿಧೆಡೆಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆ ಹಾಗೂ ಸಾಮಾನ್ಯ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಸದ್ಯದ ಪರಿಸ್ಥಿತಿ ಪೂರಕವಾಗಿಲ್ಲ. ಆದ್ದರಿಂದ ಇದನ್ನು ಮುಂದೂಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್‍ನಲ್ಲೂ ಕೆಲವು ಪಂದ್ಯಗಳು ನಡೆಯುತ್ತಿದ್ದು, ಹೊಸ ವರ್ಷದಲ್ಲಿ ಹೊಸ ಉತ್ಸಾಹದೊಂದಿಗೆ ಪ್ರೇಕ್ಷಕರು ಹಾಗೂ ಕ್ರೀಡಾಭಿಮಾನಿಗಳನ್ನು ಆಕರ್ಷಿಸಲು ದಿನಾಂಕದ ಬಗ್ಗೆ ಈಗಲೂ ಮಾತುಕತೆ ನಡೆಯುತ್ತಿದೆ.

ಆದರೆ, ಪಾಲ್ಗೊಳ್ಳುವ ತಂಡಗಳು, ಸದಸ್ಯರ ತಂಡದ ಆಟಗಾರರು ಅವರ ಪ್ರವಾಸ ಹಾಗೂ ಉಳಿಯುವ ಸ್ಥಳಗಳನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರಗಳನ್ನು ತಿಳಿಸಬಹುದು ಎಂದು ಹೇಳಿದ್ದಾರೆ. ಅಕ್ಟೋಬರ್‍ನಲ್ಲಿ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಆರಂಭಗೊಂಡು ಡಿಸೆಂಬರ್‍ವರೆಗೂ ನಡೆಯುತ್ತಿತ್ತು. ಆದರೆ, ಕೋವಿಡ್‍ನಿಂದ ಎಲ್ಲ ನಿರ್ಧಾರಗಳೂ ಬದಲಾಗಿವೆ.

ಈಗ ಬದಲಾಗುವ ವಾತಾವರಣ ಮತ್ತು ಹವಾಗುಣಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರ ನಡುವೆ ಈಗಾಗಲೇ ಮೆಲ್ಬೋರ್ನ್‍ನ ಬ್ಯಾಸ್ಕೆಟ್‍ಬಾಲ್ ಕ್ಲಬ್‍ವೊಂದು 11 ಮಂದಿ ಆಟಗಾರರಿಗೆ ತರಬೇತಿ ಆರಂಭಿಸಿತ್ತು.

Facebook Comments