ಬಿಟ್ಟು ಹೋಗಿದ್ದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26- ಪ್ರಯಾಣಿಕ ರೊಬ್ಬರು ಆಟೋರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಪರ್ಸ್‍ನ್ನು ಚಾಲಕ ಪ್ರಾಮಾಣಿಕ ವಾಗಿ ಫೋಲೀಸ್ ಆಯುಕ್ತರ ಕಚೇರಿಗೆ ತಲುಪಿಸಿದ್ದು ಅವರ ಕಾರ್ಯವನ್ನು ಆಯುಕ್ತರು ಪ್ರಶಂಸಿಸಿದ್ದಾರೆ.

ಆಟೋ ಚಾಲಕ ಶ್ರೀಕಂಠಯ್ಯ ಅವರು ತಮ್ಮ ಆಟೋ ರಿಕ್ಷಾದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಪರ್ಸ್‍ನ್ನು ಆಯುಕ್ತರ ಕಚೇರಿಗೆ ತಲುಪಿಸಿದ್ದಾರೆ.

ಮಹದೇವಪುರದ ಬಳಿ ಇರುವ ಮಾಲ್‍ನಿಂದ ಇವರ ಆಟೋ ಹತ್ತಿದ ಮಹಿಳೆ ಒಂದು ಕಿ.ಮೀ. ದೂರ ಪ್ರಯಾಣಿಸಿದ ನಂತರ ಇಳಿದು ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಚಾಲಕ ಶ್ರೀಕಂಠಯ್ಯ ಅವರು ಹಿಂದೆ ತಿರುಗಿ ನೋಡಿದಾಗ ಆಟೋದ ಸೀಟ್ ಕೆಳಭಾಗದಲ್ಲಿ ಪರ್ಸ್ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಅದನ್ನು ಫೋಲೀಸ್ ಆಯುಕ್ತರ ಕಚೇರಿಯ ಉಪಫೋಲೀಸ್ ಆಯುಕ್ತರ ಪಿಆರ್‍ಒ ಕಚೇರಿಗೆ ಬಂದು ಪರ್ಸ್ ಒಪ್ಪಿಸಿದ್ದಾರೆ.

ಆಟೋ ಚಾಲಕ ಶ್ರೀಕಂಠಯ್ಯ ಅವರ ಸಮ್ಮುಖದಲ್ಲೇ ಪಿಆರ್‍ಒ ಕಚೇರಿ ಸಿಬ್ಬಂದಿ ಪರ್ಸ್ ಪರಿಶೀಲಿಸಿದಾಗ ಅಲ್ಲಿ ದೊರೆತ ಫೋನ್ ನಂಬರ ಸಹಾಯದಿಂದ ಪರ್ಸ್‍ನ ವಾರಸುದಾರರಾದ ಭಕ್ತಿಮಂತ್ರಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಆಕೆಯನ್ನು ಆಯುಕ್ತರ ಕಚೇರಿಗೆ ಕರೆಸಿ 4 ಎಟಿಎಮ್ ಕಾರ್ಡ್, 4 ಸಾಪಿಂಗ್ ಕಾರ್ಡ್ ಮತ್ತು ಗುರುತಿನ ಚೀಟಿ ಒಳಗೊಂಡ ನೀಲಿ ಬಣ್ಣದ ಪರ್ಸ್‍ನ್ನು ಶ್ರೀಕಂಠಯ್ಯ ಮೂಲಕ ಮಹಿಳೆ ಭಕ್ತಿಮಂತ್ರಿ ಅವರಿಗೆ ಹಿಂದಿರುಗಿಸಲಾಗಿದೆ. ಶ್ರೀಕಂಠಯ್ಯ ಅವರ ಪ್ರಾಮಾಣಿಕತೆ ಯನ್ನು ನಗರ ಪೆÇಲೀಸ್ ಆಯುಕ್ತರು ಶ್ಲಾಘಿಸಿದರು.

Facebook Comments