ಮಹಿಳೆಗೆ ಐ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟುಹೋಗಿದ್ದ ಐ ಫೋನ್ ಮತ್ತು ಇತರೆ ವಸ್ತುಗಳನ್ನು ಹೆಬ್ಬಾಳ ಠಾಣೆಗೆ ತಲುಪಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಕವಿತಾ ಪಾಂಡೆ ಎಂಬುವವರು ತಮ್ಮ ಐ ಫೋನ್ ಮತ್ತು ಇತರೆ ವಸ್ತುಗಳನ್ನು ಮರೆತು ಆಟೋದಲ್ಲಿ ಬಿಟ್ಟುಹೋಗಿ ದ್ದರು. ಇದನ್ನು ಗಮನಿಸಿದ ಚಾಲಕ ಸಂತೋಷ್ ಎಂಬು ವವರು ಹೆಬ್ಬಾಳ ಠಾಣೆಗೆ ತಲುಪಿಸಿದ್ದಾರೆ.

ಹೆಬ್ಬಾಳ ಠಾಣೆ ಫೋಲೀಸರು ಕವಿತಾ ಪಾಂಡೆ ಅವರಿಗೆ ಈ ವಸ್ತುಗಳನ್ನು ಹಿಂದಿರುಗಿಸಿದ್ದಾರೆ. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮತ್ತು ಹೆಬ್ಬಾಳ ಠಾಣೆ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿ ಪ್ರಾಮಾಣಿಕತೆ ಮೆಚ್ಚಿ ಆಟೋ ಚಾಲಕ ಸಂತೋಷ್ ಅವರನ್ನು ಅಭಿನಂದಿಸಿದ್ದಾರೆ.

Facebook Comments