100 ರೂ. ಆಸೆಗೆ ಬಿದ್ದು 6 ಸಾವಿರ ರೂ. ಕಳೆದುಕೊಂಡ ಆಟೋ ಚಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು. ಅ22. ನೂರು ರೂಗೆ ಬಾಡಿಗೆ ಬಂದು ತನ್ನ ಆಟೋ ರಕ್ಷಿಸಿಕೊಳ್ಳಲು ಆಟೋಚಾಲಕ ಆರು ಸಾವಿರ ದಂಡ ತೆತ್ತ ಘಟನೆ ನಡೆದಿದೆ.
ಬುಧವಾರ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಧುವನ ಲೇಔಟ್ ನಲ್ಲಿರುವ ಮುಕ್ತವಿಶ್ವವಿದ್ಯಾಲದ ಗೇಟ್ ಬಳಿನ ಸೇತುವೆ ಕುಸಿದಿದ್ದು ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ವಿವಿ ಯಲ್ಲೆ ಲಾಕ್ ಆಗಿದ್ದರು ವಿಷಯ ತಿಳಿದ ಜಿಲ್ಲಾಡಳಿತ ಅಗ್ನಿಶಾಮಕ ದಳದ ಮೂಲಕ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದರು.

ಆದರೆ ವಿದ್ಯಾರ್ಥಿಗಳನ್ನು ಕರೆತಂದಿದ್ದ ಆಟೋ ಮಾತ್ರ ಹೋರಬರಲು ಜಾಗವಿಲ್ಲದೆ ಅಲ್ಲೆಯೇ ಉಳಿಯಬೇಕಾಯಿತು ಆಟೋಚಾಲಕ ರಕ್ಷಣೆಗಾಗೆ ವಿವಿ ಸಿಬ್ಬಂದಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಕೂಡ ಆಟೋಚಾಲಕನ ನೆರವಿಗೆ ಬರಲಿಲ್ಲ ಸೇತುವೆ ದುರಸ್ಥಿಗೆ ಕೆಲ ದಿನಗಳು ಬೇಕಾಗುತ್ತದೆ ಅಲ್ಲಯವರೆಗೂ ಆಟೋ ಅಲ್ಲಿಯೇ ಇದ್ದರೇ ಹಾಳಾಗುತ್ತದೆ ಜೋತೆಗೆ ಜೀವನ ನಿರ್ವಹಣೆ ಹೇಗೆ ಎಂದು ಕೋನೆಗೆ ಸಾಲ ಮಾಡಿ ಕ್ರೇನ್ ಕರೆತಂದು ಆರು ಸಾವಿರ ಹಣ ಕೊಟ್ಟು ಆಟೋವನ್ನು ರಕ್ಷಿಸಿಕೊಂಡಿದ್ದನೆ ಎಂದು ಆಟೋ ಚಾಲಕ ತನ್ನ ಅಳಲನ್ನು ತೊಡಿಕೊಂಡಿದ್ದಾರೆ,
ನೂರು ರೂಪಾಯಿ ಬಾಡಿಗೆಗೆ ಬಂದು ಆರು ಸಾವಿರ ದಂಡ ತೆರಬೇಕಾಯಿತು

Facebook Comments