ಮೀಟರ್ ದರ ಏರಿಕೆಗೆ ಆಗ್ರಹಿಸಿ ಆಟೋ ಚಾಲಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.3- ಆಟೋ ಮೀಟರ್ ದರ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಪ್ರತಿ ತಿಂಗಳು ಏಳೂವರೆ ಸಾವಿರ ರೂ. ಪರಿಹಾರವನ್ನು ಈ ತಿಂಗಳವರೆಗೂ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಬಿ.ವಿ.ರಾಘವೇಂದ್ರ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಈ ಹಿಂದೆ ಘೋಷಿಸಿದಂತೆ ಐದು ಸಾವಿರ ರೂ. ಪರಿಹಾರದ ಹಣವನ್ನು ವಿಸ್ತರಿಸಿ ಸಮಯ ಅವಕಾಶ ನೀಡಬೇಕು. ಹೊಸ ಆಟೋ ರಿಕ್ಷಾಗಳ ಮೇಲಿನ ರಾಜ್ಯ ಸರ್ಕಾರದ ಮಾರಾಟ ತೆರಿಗೆಯನ್ನು ಶೇ. 28ರಿಂದ ಶೇ.5ಕ್ಕೆ ಇಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

15 ವರ್ಷಗಳ ಹಳೆಯ 2ಸ್ಟ್ರೋಕ್ ಮತ್ತು 4 ಸ್ಟ್ರೋಕ್ ಆಟೋಗಳ ಅರ್ಹತಾ ಪತ್ರ ನವೀಕರಣ(ಎಫ್‍ಸಿ) ಮಾಡಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಆಟೋ ಮೀಟರ್ ದರವನ್ನು 2 ಕಿ.ಮೀಗೆ 36 ರೂ. ಹಾಗೂ ಪ್ರತಿ ಕಿ.ಮೀಗೆ 18 ರೂ. ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

Facebook Comments

Sri Raghav

Admin