ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿದ್ದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4- ನಗರದ ಹಲವು ಕಡೆ ಆಟೋ ರಿಕ್ಷಾಗಳನ್ನು ಕಳ್ಳತನ ಮಾಡಿದ್ದ ಕೋಲಾರ ಮೂಲದ ಇಬ್ಬರನ್ನು ಯಶವಂತಪುರ ಠಾಣೆ ಪೆÇಲೀಸರು ಬಂಧಿಸಿ 5.7 ಲಕ್ಷ ರೂ. ಮೌಲ್ಯದ 5 ಆಟೋ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ.  ಕೋಲಾರ ಜಿಲ್ಲೆ ಕೆಜಿಎಫ್ ರಾಬನ್‍ಸನ್‍ಪೇಟೆಯ ಪೀರ್‍ಪಾಷಾ(47) ಮತ್ತು ಜೋಯಲ್ ರಿಂಕು(34) ಬಂಧಿತ ಆರೋಪಿಗಳು.

ಜೂ.30ರಂದು ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಪಿಎಸ್‍ಐ ವಿನೋದ್ ರಾಥೋಡ್ ಹಾಗೂ ಸಿಬ್ಬಂದಿ ರಾತ್ರಿ ಕಫ್ರ್ಯೂವನ್ನು ಪರಿಣಾಮಕಾರಿ ಜಾರಿಗಾಗಿ ರಾತ್ರಿ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಚಲಾಯಿಸಿಕೊಂಡು ಬಂದ ಆಟೋ ರಿಕ್ಷಾವನ್ನು ತಡೆದು ದಾಖಲಾತಿಗಳನ್ನು ಪರಿಶೀಲಿಸಿದಾಗ ಆಟೋದಲ್ಲಿದ್ದ ಆರೋಪಿಗಳು ಸಮಂಜಸವಾದ ಉತ್ತರ ನೀಡದೆ ಇದುದ್ದರಿಂದ ಠಾಣೆಗೆ ಕರೆತಂದು ವಿಚಾರಿಸಿದಾಗ ಆಟೋ ರಿಕ್ಷಾ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಯಶವಂತಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments