ಆರಂಭಿಕ ಪಂದ್ಯದಲ್ಲೇ ದಾಖಲೆ ಬರೆದ ಅಕ್ಷರ್ ಪಟೇಲ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.16- ಆಂಗ್ಲ ಬ್ಯಾಟ್ಸ್ ಮನ್‍ಗಳನ್ನು ಕಾಡಿ ಭಾರತ ತಂಡಕ್ಕೆ 317 ರನ್‍ಗಳ ಗೆಲುವು ತಂದುಕೊಟ್ಟ ಸ್ಪಿನ್ನರ್ ಅಕ್ಷರ್‍ ಪಟೇಲ್ ಅವರು ಆರಂಭಿಕ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ.  ಮೊದಲ ಇನ್ನಿಂಗ್ಸ್‍ನಲ್ಲಿ ಅಷ್ಟೇನು ಪರಿಣಾಮಕಾರಿ ಬೌಲಂಗ್ ಮಾಡದ ಅಕ್ಷರ್ ದ್ವಿತೀಯ ಇನ್ನಿಂಗ್ಸ್‍ನಲ್ಲಿ 5 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ 5 ವಿಕೆಟ್‍ಗಳ ಗೊಂಚಲು ಪಡೆದ 9 ನೇ ಬೌಲರ್ ಎಂಬ ಕೀರ್ತಿಗೆ ಅಕ್ಷರ್ ಭಾಜನರಾಗಿದ್ದಾರೆ.

ಇದಕ್ಕೂ ಮುನ್ನ 1932ರಲ್ಲಿ ಮೊಹಮ್ಮದ್ ನಿಸ್ಸಾರ್ ಅವರು ಪಾದಾರ್ಪಣೆ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ ಚೊಚ್ಚಲ 5 ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಕೀರ್ತಿ ಪಡೆದರು. ಆ ನಂತರ ವಾಮನ್‍ಕುಮಾರ್, ಸಯ್ಯದ್ ಅಬಿದ್ ಅಲಿ, ದಿಲಿಪ್ ದೋಷಿ, ನರೇಂದ್ರ ಹಿರ್ವಾನಿ, ಅಮಿತ್‍ಮಿಶ್ರಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ ಅವರು ಕೂಡ ತಾವು ಪಾದಾರ್ಪಣೆ ಮಾಡಿದ ಟೆಸ್ಟ್ ಪಂದ್ಯದಲ್ಲಿ 5 ಹಾಗೂ ಅದಕ್ಕೂ ಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಗಳಾಗಿದ್ದಾರೆ.

Facebook Comments