BREAKING : ಮುಗಿಲು ಮುಟ್ಟಿದ ರಾಮನಾಮ ಜಪ, ಭಾರತೀಯರ ಕನಸಿನ ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ..!

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆ,ಆ.5-ವೇದ, ಮಂತ್ರ, ಘೋಷ, ಜೈಕಾರ, ಹಷೋದ್ಘಾರಗಳ ನಡುವೆ ಮರ್ಯಾದ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ನೆರವೇರುವುದರೊಂದಿಗೆ ಬಹುದಿನಗಳ ಭಾರತೀಯರ ಕನಸು ಇಂದು ಈಡೇರಿತು.

ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ನಿರ್ಮಾಣವಾಗಬೇಕೆಂದು ಕನಸು ಕಂಡಿದ್ದ ಕೋಟ್ಯಂತರ ಭಾರತೀಯರು ಕಾಯುತ್ತಿದ್ದ ಆ ಶುಭ ಗಳಿಗೆಗೆ ಇಂದು ಮಧ್ಯಾಹ್ನ 12 ಗಂಟೆ 44 ನಿಮಿಷ 8 ಸೆಕೆಂಡ್‍ನಿಂದ 12 ಗಂಟೆ 44 ನಿಮಿಷ 40 ಸೆಕೆಂಡ್‍ವರೆಗೂ ಸಲ್ಲಿದ ಅಭಿಜಿನ್ ಲಗ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು.

ಅತ್ತ ಅಯೋಧ್ಯೆಯಲ್ಲಿ 40 ಕೆಜಿಯ ಬೆಳ್ಳಿ ಇಟ್ಟಿಗೆ ಇಟ್ಟು ಶ್ರೀರಾಮ ಮಂದಿರಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಂತೆ ಎಲ್ಲೆಲ್ಲೂ ಶ್ರೀರಾಮನ ಜಪ ಮಾಡಲಾಯಿತು.  ಪ್ರತಿಯೊಬ್ಬರ ಬಾಯಲ್ಲೂ ಜೈ ಶ್ರೀರಾಮ್ ಎಂಬ ಘೋಷಣೆಗಳು ಮೊಳಗಿದವು. ಒಂದು ಕ್ಷಣ ದೇಶಕ್ಕೆ ದೇಶವೇ ರಾಮನ ಜಪದಲ್ಲಿ ತೊಡಗಿತ್ತು. ಅಷ್ಟರಮಟ್ಟಿಗೆ ಭಾರತೀಯರಲ್ಲಿ ಶ್ರೀರಾಮ ಆಕರ್ಷಿತನಾಗಿದ್ದ.

ಸಾಧುಸಂತರು, ಧಾರ್ಮಿಕ ಮುಖಂಡರ ವೇದಮಂತ್ರ, ಹೋಮಹವನ, ಜಪತಪ ಹಾಗೂ ಗಂಗಾ, ಕಾವೇರಿ, ಯಮುನಾ ಸೇರಿದಂತೆ ಜೀವನದಿನಗಳ ಜಲಾಭಿಷೇಕ ನಡೆಸಲಾಯಿತು.  ರಾಮಮಂದಿರದ ಸುತ್ತ ನಾಲ್ಕು ಚಿಕ್ಕ ಮಂದಿರಗಳಿರಲಿದ್ದು, ಭರತ, ಲಕ್ಷ್ಮಣ, ಸೀತಾ ಮತ್ತು ಗಣೇಶ ದೇವರ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ.

ಮಂದಿರದ ಎಡಭಾಗದಲ್ಲಿ ಬೃಹತ್ ಕಲಾವೇದಿಕೆ ಹಾಗೂ 4 ದಿಕ್ಕುಗಳಿಂದ ಪ್ರವೇಶದ್ವಾರ, ವೇದಿಕೆ ಸಮೀಪದಲ್ಲಿ ಶ್ರೀರಾಮ ಸಂಶೋಧನಾ ಕೇಂದ್ರ, ಎಂಟು ಅತಿಥಿ ಗೃಹ, ಭೋಜನ ಶಾಲೆ, ಸುಸಜ್ಜಿತ ಕಾಂಪೌಂಡ್ ಸೇರಿದಂತೆ ಎಲ್ಲ ರೀತಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರಲಿದೆ. 2024ರ ವೇಳೆಗೆ ರಾಮಮಂದಿರವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ವಿಶೇಷವೆಂದರೆ ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.
ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ.

ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.

ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಯೂ ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ 555 ಕಿಲೋಮೀಟರ್ ದೂರದಲ್ಲಿದೆ.

ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದ ನಾಯಕನಾದ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ.

ರಾಮ ಜನ್ಮಭೂಮಿಯು ಸೀತೆ ಅಡುಗೆ ಮಾಡಿದ್ದ ಸ್ಥಳ ಅಥವಾ ಸೀತಾ ಕೀ ರಸೋಯಿ ಹಾಗೂ ಹನುಮಾನ(ಶ್ರೀರಾಮನ ಪರಮ ಭಕ್ತ) ಮಂದಿಗಳಿಂದ ಕೂಡಿದೆ. ಕಟ್ಟಡಗಳ ನಿರ್ಮಾಣ . ಅಯೋಧ್ಯೆಯಲ್ಲಿ ಹಿಂದೂಗಳಿಂದರಾಮ ಜನ್ಮಸ್ಥಳ ಅಥವಾ ರಾಮ ಚಬೂತರ ಮತ್ತು ಸೀತೆ ಅಡುಗೆ ಮಾಡಿದ್ದ ಸ್ಥಳ ಅಥವಾ ಸೀತಾ ಕೀ ರಸೋಯಿ (ಸೀತಾ ಮಾತೆ ಶ್ರೀರಾಮನ ಧರ್ಮಪತ್ನಿ) ಮಂದಿಗಳ ನಿರ್ಮಾಣವಾಗಿದೆ.

ರಾಮ ಜನ್ಮಭೂಮಿಯು ಶ್ರೀರಾಮಚಂದ್ರನ ಮತ್ತು ಹಿಂದೂಗಳ ಪೂಜಾ ಸ್ಥಳ. ಹಿಂದೂಗಳು ಅನಾದಿ ಕಾಲದಿಂದಲೂ ಈ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಪರಿಗಣಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ.
ರಾಮ ಜನ್ಮಭೂಮಿಯು 1994ರ ಡಿಸೆಂಬರ 22-23ರ ಮಧ್ಯರಾತ್ರಿ ಹಿಂದೂಗಳಿಂದ ವಿಗ್ರಹಗಳನ್ನು ತಂದಿಟ್ಟದ್ದು ಸ್ಥಾಪಿಸಲಾಗಿದೆ. ಅಲ್ಲದೆ ಹೊರ, ಒಳ ಆವರಣದಲ್ಲಿಯೂ ಅವರು ಪೂಜಾಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.

ದಶಕಗಳಿಂದ ಕಗ್ಗಂಟಾಗಿದ್ದ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘ ವರ್ಷಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಪಂಚ ಪೀಠವು, ವಿವಾದಾತ್ಮಕ ಬಾಬ್ರಿ ಮಸೀದಿ ಜಾಗವು ಶ್ರೀರಾಮ ಜನಿಸಿದ ಸ್ಥಳವೆಂದು ಐತಿಹಾಸಿಕ ತೀರ್ಪು ನೀಡಿತ್ತು.

ಇನ್ನು ಬೆಳಗ್ಗೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಲಖ್ನೋಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿ ಬೆನ್ ಪಟೇಲ್ ಮತ್ತಿತರರು ಬರಮಾಡಿಕೊಂಡರು.

ಲಖ್ನೋದಿಂದ ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ಹೆಲಿಕಾಪ್ಟರ್‍ನಲ್ಲಿ ಮೋದಿ ಮತ್ತಿತರರು ಅಯೋಧ್ಯೆಗೆ ಆಗಮಿಸಿದರು. ಶಂಕುಸ್ಥಾಪನೆ ನೆರವೇರಿಸುವ ಮುನ್ನ ಹನುಮಾನ್ ಗಡಿ ದೇವಾಲಯಕ್ಕೆ ಭೇಟಿ ನೀಡಿ ರಾಮಲಲ್ಲಾ ದೇವಾಲಯದಲ್ಲಿ ದರ್ಶನ ಪಡೆದರು.

Prime Minister @narendramodi  arrives in Ayodhya for the #BhoomiPoojan of #RamMandir

ಮೋದಿ ಪ್ರಧಾನಿಯಾದ ನಂತರ ಅಯೋಧ್ಯೆಗೆ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲಿ ಐದು ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಪ್ರಧಾನಿ ಮೋದಿ, ಸಿಎಂ ಆದಿತ್ಯನಾಥ್, ರಾಜ್ಯಪಾಲ ಆನಂದಿ ಬೆನ್ ಪಟೇಲ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ವೇದಿಕೆಯಲ್ಲಿದ್ದರು.

ಉಳಿದಂತೆ ದೇಶದ ನಾನಾ ಭಾಗಗಳಿಂದ 175 ಸಾಧುಸಂತರು, ಧಾರ್ಮಿಕ ಮುಖಂಡರಿಗೂ ಆಹ್ವಾನ ನೀಡಲಾಗಿತ್ತು. ಅಯೋಧ್ಯೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಿಂದೆಂದೂ ಕಾಣದಷ್ಟು ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.

Facebook Comments

Sri Raghav

Admin