‘ರಾಹುಲ್ ಯೋಗ ಮಾಡ್ಲಿಲ್ಲ, ಅದಕ್ಕೆ ಕಾಂಗ್ರೆಸ್ ನೆಲಕಚ್ಚಿದೆ’

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.20- ಯೋಗದ ಮಹತ್ವವನ್ನು ವಿಶ್ಲೇಷಿಸಿರುವ ಯೋಗ ಗುರು ರಾಮದೇವ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ತಮ್ಮದೇ ಆದ ಕಾರಣ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಸೋಲು ಕಂಡಿದೆ ಎಂದು ಪತಂಜಲಿ ಸಂಸ್ಥೆಯ ಮುಖ್ಯಸ್ಥರು ವಿಶ್ಲೇಷಣೆ ಮಾಡಿದ್ದಾರೆ.

ನಾಳೆ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು ಈ ಸಂಬಂಧ ತಯಾರಿ ನಡೆಸಿರುವ ರಾಮದೇವ್ ಯೋಗ ಮಾಡುವವರಿಗಷ್ಟೇ ಒಳ್ಳೆದಿನ (ಅಚ್ಚೇ ದಿನ್) ಬರುತ್ತದೆ ಎಂದು ಹೇಳಿದ್ದಾರೆ. ಯೋಗವನ್ನು ವಿಶ್ವವ್ಯಾಪಿ ಜನಪ್ರಿಯಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿರುವ ರಾಮದೇವ್, ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ ಎಂದು ಟೀಕಿಸಿದ್ದಾರೆ.

ಮೋದಿ ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಯೋಗಾಭ್ಯಾಸ ಮಾಡುತ್ತಿದ್ದರು. ಆದರೆ ಅವರ ವಂಶದ ಕುಡಿಯಾಗಿರುವ ರಾಹುಲ್ ಗಾಂಧಿ ಯೋಗ ಮಾಡುವುದಿಲ್ಲ. ಹಾಗಾಗಿ ಅವರ ರಾಜಕೀಯ ಜೀವನ ಇಳಿಮುಖದತ್ತ ಸಾಗಿದೆ. ಯೋಗ ಮಾಡುವವರಿಗೆ ಮಾತ್ರಅಚ್ಚೇ ದಿನ್ ಬರುತ್ತದೆ ರಾಮದೇವ್ ವ್ಯಾಖ್ಯಾನಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ