“ಟಿ-20 ವಿಶ್ವಕಪ್‍ನಲ್ಲಿ ಭಾರತ ವಿರುದ್ಧ ಪಾಕ್ ಗೆದ್ದೇಗೆಲ್ಲುತ್ತೆ”

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಅ.14-ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ ಈ ಬಾರಿ ನಾವು ಸಾಂಪ್ರಾದಾಯಿಕ ಎದುರಾಳಿ ಭಾರತ ವಿರುದ್ಧ ಜಯ ಸಾಧಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಅಕ್ಟೋಬರ್ 24 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕ್ ಮತ್ತು ಭಾರತ ಸೆಣಸಾಡಲಿವೆ.
ಈ ಮೈದಾನದಲ್ಲಿ ನಾವು ಹಲವಾರು ಪಂದ್ಯಗಳನ್ನಾಡಿರುವುದರಿಂದ ನಮಗೆ ದುಬೈ ಹವಾಮಾನ ನಮಗೆ ಹೊಂದಿಕೊಂಡಿದೆ. ಹೀಗಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ನಾವು ಈ ಬಾರಿ ಗೆದ್ದೆ ಗೆಲ್ಲುತ್ತೇವೆ ಎನ್ನುತ್ತಾರೆ ಆಜಮ್.

ಮೈದಾನದಲ್ಲಿ ವಿಕೇಟ್ ಹೇಗೆ ಬೀಳುತ್ತದೆ ಎನ್ನುವ ಅಧಾರದ ಮೇಲೆ ಆಟದ ಗೆಲುವು ಆಡಗಿದೆ. ನಾವು ನಮ್ಮನ್ನು ಕೇಳಿದರೆ ಈ ಬಾರಿ ಜಯ ನಮ್ಮದೆ ಎನಿಸುತ್ತದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಏಕದಿನ ಪಂದ್ಯ ಹಾಗೂ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ಇದುವರೆಗೂ ಭಾರತದ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ ನಾವು ಸೋಲಿನ ಸರಣಿಗೆ ಮುಕ್ತಿ ಹಾಡುತ್ತೇವೆ ಎಂದು ಆಜಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments