ವಿಶೇಷಚೇತನ ಮಗುವನ್ನು ಬಾವಿಗೆಸೆದ ನಿರ್ದಯಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ, ಮಾ. 10- ಹೆತ್ತವರಿಗೆ ಹೆಗ್ಗಣ ಮುದ್ದು… ಹೆಣ್ಣಾಗಲಿ…. ಗಂಡಾಗಲಿ… ಅಥವಾ ಜನಿಸಿದ ಮಗು ಹೇಗೆ ಇರಲಿ… ಮಾತೃವಾತ್ಸಲ್ಯ ಮಾತ್ರ ಕುಗ್ಗದು. ಆದರೆ ನಿರ್ದಯಿ ಕುಟುಂಬವೊಂದು ಜನಿಸಿದ ಮಗು ವಿಶೇಷಚೇತನವಾಗಿ ಹುಟ್ಟಿದೆ ಎಂದು ಬಾವಿಗೆ ಎಸೆದು ಮಾನವೀಯತೆ ಮರೆತಿರುವ ಘಟನೆ ತಾಲೂಕಿನ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೂಲತಃ ತಾಲೂಕಿನ ಮರಳೇಬೇಕುಪ್ಪೆ ಗ್ರಾಮದ ಶಂಕರ ಮತ್ತು ಮಮತ ಎಂಬ ದಂಪತಿಯ ಎರಡು ವರ್ಷದ ಪುಟ್ಟ ಮಗು ಮಹದೇವಿ ದುರಂತ ಸಾವಿಗೀಡಾದ ಮಗು. ನಿನ್ನೆ ಬೆಳಿಗ್ಗೆ ಯಡಮಾರನಹಳ್ಳಿ ಹೊರವಲಯದ ಮಹದೇಶ್ವರ ದೇವಾಲಯದ ಸಮೀಪವಿರುವ ಪಾಳುಬಾವಿಯಲ್ಲಿ ಪುಟ್ಟಮಗು ತೇಲುತ್ತಿರುವುದನ್ನು ನೋಡಿದ ಅರ್ಚಕರು ಸಾತನೂರು ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಸರ್ಕಲ್ ಇನ್ಸ್‍ಪೆಕ್ಟರ್ ಟಿ.ಟಿ.ಕೃಷ್ಣ ಹಾಗು ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬಾವಿಯಲ್ಲಿ ಬಿದ್ದಿದ್ದ ಮಗುವಿನ ಶವವನ್ನು ಹೊರ ತೆಗೆದಿದ್ದಾರೆ. ಯಡಮಾರನಹಳ್ಳಿ ಗ್ರಾಮದ ಪಾಳು ಬಾವಿಯಲ್ಲಿ ದೊರೆತ ಎರಡು ವರ್ಷದ ಪುಟ್ಟಮಗುವಿನ ಶವ ದೊರೆತ ಕೆಲ ಹೊತ್ತಿನಲ್ಲಿಯೇ ಆ ಮಗುವಿನ ಪೋಷಕರನ್ನು ಪತ್ತೆಹಚ್ಚಿ ಘಟನೆಗೆ ಸಂಬಂಸಿದಂತೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಗುವಿನ ಕೊಲೆಗೆ ಮಗು ಅಂಗವಿಕಲತೆ ಹೊಂದಿದ್ದೇ ಕೊಲೆಗೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಮಗುವಿನ ಅಜ್ಜಿ, ತಂದೆ, ತಾಯಿ ಪೆÇಲೀಸರ ಮುಂದೆ ಮಗುವನ್ನು ಬಾವಿಗೆಸೆದು ಸಾಯಿಸಿರುವ ಬಗ್ಗೆ ತಪ್ಪೋಪ್ಪಿಕೊಂಡಿದ್ದಾರೆ. ಬಾವಿಯಲ್ಲಿ ಬಿದ್ದ ಮಗುವಿನ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಮಮ್ಮಲ ಮರುಗಿದರು. ಆರೋಪಿ ಗಳನ್ನು ಬಂಸಿ ವಿಚಾರಣೆ ನಡೆಸಿ ರುವ ಸಾತನೂರು ಪೆÇಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin