ಕೊರೊನಾ ಲಸಿಕೆ ಪಡೆದ ಅಮಿತಾಬ್ ಬಚ್ಚನ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಏ.2- ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೊರೊನಾ ಲಸಿಕೆ ಪಡೆದಿದ್ದಾರೆ. ಇಡೀ ಕುಟುಂಬ ಕೊರೊನಾ ಪೀಡಿತರಾಗಿ ಈಗ ಗುಣಮುಖರಾಗಿದ್ದು, ಲಸಿಕೆ ಪಡೆಯುವುದರಿಂದ ಸೋಂಕನ್ನು ನಿಯಂತ್ರಿಸಬಹುದು ಎಂಬ ಆರೋಗ್ಯ ಇಲಾಖೆಯ ಸಲಹೆಯನ್ನು ಈಗ ಎಲ್ಲರೂ ಪಾಲಿಸುತ್ತಿದ್ದಾರೆ.

ಅದರಂತೆ ಇಂದು ಲಸಿಕೆ ಪಡೆದ ನಂತರ ಬಿಗ್ ಬಿ ಮಾತನಾಡಿ, ನಾವು ಮತ್ತೊಮ್ಮೆ ಸೋಂಕು ಪರೀಕ್ಷೆಗೆ ಒಳಗಾಗಿದ್ದೇವೆ. ಎಲ್ಲರಿಗೂ ನೆಗೆಟಿವ್ ಎಂಬ ವರದಿ ಇಂದು ಬೆಳಗ್ಗೆ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಇಂದು ಸ್ವತಃ ನಾನೇ ಲಸಿಕೆ ಪಡೆಯುತ್ತಿದ್ದೇನೆ. ಸದ್ಯದಲ್ಲಿಯೇ ನನ್ನ ಕುಟುಂಬ ಸದಸ್ಯರು ಕೂಡ ಲಸಿಕೆಯನ್ನು ಪಡೆಯುತ್ತಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

Facebook Comments