ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ : ಸಂಸದ ಬಚ್ಚೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಮೇ 29-ಕ್ಷೇತ್ರದ ಜನತೆ ದೇಶದ ಹಿತದೃಷ್ಟಿಯಿಂದ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನು ಮಾಡಲು ಕಂಕಣ ತೊಟ್ಟಿರುವುದೇ ಈ ಚುನಾವಣೆಯ ಅಭೂತಪೂರ್ವ ಫಲಿತಾಂಶವಾಗಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ತಾಲೂಕಿನ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಬಚ್ಚೇಗೌಡರ ನಿವಾಸಕ್ಕೆ ತೆರಳಿ ಸಲ್ಲಿಸಿದ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿ, ಕ್ಷೇತ್ರದ ಜನತೆಗೆ ಅಭಾರಿಯಾಗಿದ್ದೇನೆ, ಕ್ಷೇತ್ರದ ಅಭಿವೃದ್ದಿಗಾಗಿ ಪಕ್ಷಾತೀತವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಜಿಲ್ಲೆಗೆ ಕೃಷ್ಣ ನದಿ ನೀರು: ಕ್ಷೇತ್ರದಲ್ಲಿ ನೀರಿನ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಎತ್ತಿನಹೊಳೆ ಕಾಮಗಾರಿಗೆ ಒತ್ತು ನೀಡಲಾಗುವುದು ಜತೆಗೆ ನೆರೆಯ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿ ನೀರು (ಆಂದ್ರಿನವಾ ಫಥಕಂ) ಯೋಜನೆಯಲ್ಲಿ ನೀರನ್ನು ತಾಲೂಕಿನ ಪಕ್ಕದ ಹಿಂದೂಪರಕ್ಕೆ ತರಲಾಗಿದೆ , ಇದರಿಂದ 10 ಟಿಎಂಸಿ ನೀರು ಕರ್ನಾಟಕಕ್ಕೆ ಪಡೆಯಲು ಆಲಮಟ್ಟಿ ಡ್ಯಾಂನಿಂದ ಹೆಚ್ಚುವರಿಯಾಗಿ 10 ಟಿಎಂಸಿ ನೀರು ನೀಡಿ, ಕೃಷ್ಣಾ ನದಿ ನೀರು ಪಡೆದುಕೊಳ್ಳು ಚಿಂತನೆ ನಡೆಸಲಾಗಿದೆ, ಇದರ ಜತೆಗೆ ಆಂಧ್ರ ಪ್ರದೇಶದ ಪಟ್ಟು ಸೀಮಾ ಫಥಕಂ ಯೋಜನೆ ನೀರನ್ನೂ ಕೇಳಬಹುದಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಪ್ರತಿಯೊಂದು ತಾಲೂಕಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಒತ್ತು ನೀಡಲಾಗುವುದು, ಜತೆಗೆ ಆಯಾ ತಾಲೂಕಿನ ಅಧ್ಯಕ್ಷರು ಹಾಗೂ ಮುಖಂಡರು ಸಾರ್ವಜನಿಕ ಸಮಸ್ಯೆಗಳ ಕಡೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಎನ್.ಎಂ.ರವಿನಾರಾಯಣರೆಡ್ಡಿ, ಮುಖಂಡರಾದ ವೇಮಾರೆಡ್ಡಿ,ಎನ್.ಎಂ.ಚಿನ್ನಪ್ಪರೆಡ್ಡಿ, ರಂಗನಾಥ್, ಎಸ್.ರಮೇಶ್, ಜಯಣ್ಣ, ಮುನಿಲಕ್ಷ್ಮಮ್ಮ, ಜಯಲಕ್ಷ್ಮ್ಮಮ್ಮ, ಮಂಜುಳಾ,ಸವಿತಾ,ಚಿತ್ರಾ,ಲಕ್ಷ್ಮಿ, ಸೇರಿದಂತೆ ನೂರಾರು ಕಾರ್ಯಕರ್ತರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments