ಬಡ್ಡಿ ಮಗನ್ ಲೈಫ್‍ನ ಪ್ರೀತಿ

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಚಲಿತ ಸಮಾಜದಲ್ಲಿ ಮಧ್ಯಮ ವರ್ಗದ ಜನರು ಜೀವನ ನಡೆಸಲು ಸಾಕಾಗದೆ ಸಾಲ ಪಡೆಯುತ್ತಾರೆ. ಮುಂದೆ ಅಸಲಿನೊಂದಿಗೆ ಬಡ್ಡಿ ಪಾವತಿಸಲು ಏಣಗುತ್ತಾರೆ. ಆಗ ಅವರು ಏನು ಮಾಡುತ್ತಾರೆ. ಇಂತಹ ಘಟನೆಗಳು ಘಟಿಸುತ್ತಾ ಬದುಕಿನೊಂದಿಗೆ ಹೋರಾಟ ಮಾಡಬೇಕಾಗುತ್ತದೆ. ಇವೆಲ್ಲಾ ಅಂಶಗಳನ್ನು ದಾಖಲಿಸುವ ಜೊತೆಗೆ ಮುದ್ದಾದ ಪ್ರೀತಿ ಕತೆಯು ಬಡ್ಡಿ ಮಗನ್ ಲೈಫು ಚಿತ್ರದಲ್ಲಿ ತೋರಿಸಲಾಗುತ್ತಿದೆ.

ಪವನ್‍ಕುಮಾರ್-ಪ್ರಸಾದ್ ಜಂಟಿಯಾಗಿ ನಿರ್ದೇಶನ, ಇದರಲ್ಲಿ ಮೊದಲನೆಯವರು ಸಂಕಲನ ಮತ್ತು ಗ್ರೀನ್ ಚಿಲ್ಲಿ ಎಂಟರ್‍ಟೈನ್ ಮೆಂಟ್ ಮೂಲಕ ಬಂಡವಾಳ ಹೂಡಿದ್ದಾರೆ.
ಬ್ರಾಹ್ಮಣ ಹುಡುಗ, ಮನೆಯಲ್ಲಿ ಭಯಸ್ಥ, ಹೊರಗಡೆ ಧೈರ್ಯಶಾಲಿಯಾಗಿರುವ ಸಚ್ಚಿನ್ ಶ್ರೀಧರ್ ನಾಯಕ.

ಗೌಡರ ಮಗಳಾಗಿ ಐಶ್ವರ್ಯರಾವ್ ನಾಯಕಿ. ಬಡ್ಡಿ ಬಸಪ್ಪನಾಗಿ ಬಲರಾಜವಾಡಿ ನಾಯಕಿಯ ತಂದೆ. ದುಡ್ಡು ಮಾಡೋ ಆಸೆ, ಅದು ಒಳ್ಳೆಯ-ಕೆಟ್ಟದಾದರೂ ಪರವಾಗಿಲ್ಲ. ಇದರಿಂದ ಬೇರೆಯವರು ತೊಂದರೆ ಅನುಭವಿಸಬೇಕಾಗುತ್ತದೆ. ಇದೇ ಗುಣವುಳ್ಳ ಪಾತ್ರಕ್ಕೆ ರಜನಿಕಾಂತ್. ಸುಸ್ತಿದಾರರಿಂದ ಹಣ ವಸೂಲಿ ಮಾಡುವ ನೈಚ್ಯನಾಗಿ ಅರ್ಜುನ್‍ಸುಹಾಸ್, ಸಂಗೀತ ಒದಗಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿ ಮೊದಲಬಾರಿ ಗೆಳೆಯರ ವರಾತಕ್ಕೆ ಬಣ್ಣ ಹಚ್ಚಿದ್ದಾರೆ.

ನಾಲ್ಕು ಹಾಡುಗಳಿಗೆ ಆಶಿಕ್‍ಅರ್ಜುನ್ ಹಾಗೂ ಪ್ರೊಮೋಷನ್ ಗೀತೆಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಒದಗಿಸಿದ್ದಾರೆ. ಛಾಯಾಗ್ರಹಣ ಲಿವಿತ್, ನೃತ್ಯ ಸಚಿನ್‍ಕುಮಾರ್ ನಿರ್ವಹಿಸಿದ್ದಾರೆ. ಈಗಾಗಲೇ ಏನ್ ಚಂದಾನೊ ತಕೊ ವಿಡಿಯೋ ಹಾಡು ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

Facebook Comments