ಶಿವಣ್ಣ ಅಭಿನಯದ ಭಜರಂಗಿ 2 ಸೆಟ್‍ನಲ್ಲಿ ಬೆಂಕಿ, 1 ಕೋಟಿ ವೆಚ್ಚದ ಸೆಟ್ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ಜ.16- ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ ಭಜರಂಗಿ 2 ಚಿತ್ರದ ಸೆಟ್‍ಗೆ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿದೆ.  ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರದ ಚಿತ್ರೀಕರಣವು ನೆಲಮಂಗಲದ ಬಳಿ ಇರುವ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ 1 ಕೋಟಿ ರೂ. ವೆಚ್ಚದ ಸೆಟ್‍ನ್ನು ನಿರ್ಮಿಸಲಾಗಿತ್ತು.

ಇಂದಿನ ಚಿತ್ರೀಕರಣದಲ್ಲಿ ನಾಯಕ ನಟ ಶಿವರಾಜ್‍ಕುಮಾರ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಹಕಲಾವಿದರು ಪಾಲ್ಗೊಂಡಿದ್ದು ಶೂಟಿಂಗ್ ನಡೆಯುವ ವೇಳೆ ಸೆಟ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆಯಾದರೂ ಚಿತ್ರತಂಡದವರ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲವಾದವರೂ ಸೆಟ್ ಹಾನಿಯಾಗಿದೆ. ಭಜರಂಗಿ 2 ಸೆಟ್‍ಗೆ ಬೆಂಕಿ ಬಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಶಿವರಾಜ್‍ಕುಮಾರ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸೆಟ್‍ಗೆ ಆಗಮಿಸಿದ್ದಾರೆ.

Facebook Comments