ಬಾಳಾ ಠಾಕ್ರೆ ಗುಣಗಾನ ಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.23-ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರು ಪ್ರಬಲ ಹಿಂದುತ್ವವಾದಿಯಾಗಿದ್ದರು. ಅವರ ಚಿಂತನೆಗಳು ಇತರರಿಗೆ ಮೇಲ್ಪಂಕ್ತಿಯಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಬಾಳಾ ಠಾಕ್ರೆ ಅವರ ಜನ್ಮ ದಿನಾಚರಣೆ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಮೋದಿ ಅವರು ಠಾಕ್ರೆ ಅವರ ಗುಣಗಾನ ಮಾಡಿದ್ದಾರೆ.
1926ರಲ್ಲಿ ಜನಿಸಿದ ಠಾಕ್ರೆ ಅವರು ಮರಾಠಿ ಭಾಷೆಗಾಗಿ ಹೋರಾಟ ನಡೆಸಿ ನಂತರ ಪ್ರಬಲ ಹಿಂದುತ್ವವಾದಿಗಳಾಗಿ ಗುರುತಿಸಿಕೊಂಡಿದ್ದರು.

ಹಿಂದುತ್ವವಾದಿಯಾಗಿದ್ದರು ಠಾಕ್ರೆ ಅವರು ತಮ್ಮವರಿಗಾಗಿ ಹಾಗು ಜನರ ಕಲ್ಯಾಣಕ್ಕಾಗಿ ವಿಶ್ರಾಂತಿಯಿಲ್ಲದೆ ದುಡಿದು ಮರಾಠಿಗರ ಆರಾಧ್ಯ ದೈವವಾಗಿ ಗುರುತಿಸಿಕೊಂಡವರು ಎಂದು ಮೋದಿ ಕೊಂಡಾಡಿದ್ದಾರೆ.

Facebook Comments