“ದೊಡ್ಡ ತಿಮಿಂಗಿಲ ಬಲೆಗೆ ಬಿದ್ದಿಲ್ಲ” : ಕುತೂಹಲ ಮೂಡಿಸಿದೆ ಬಾಲಚಂದ್ರ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ/ ಬೆಂಗಳೂರು, ಮಾ.13- ಸಿಡಿ ಪ್ರಕರಣಕ್ಕೆ ಸಂಬಂ ಧಿಸಿದಂತೆ ದೂರು ನೀಡುವ ಬಗ್ಗೆ ರಮೇಶ್ ಜಾರಕಿಹೊಳಿ ಜತೆ ಚರ್ಚಿಸಿದ್ದು, ಮೂವರ ವಿರುದ್ಧ ದೂರು ನೀಡುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣದ ಕಿಂಗ್‍ಪಿನ್‍ಗಳ ಬಗ್ಗೆಯೂ ಆದಷ್ಟು ಬೇಗ ದೂರು ನೀಡುತ್ತೇವೆ. ಕಿಂಗ್‍ಪಿನ್‍ಗಳಿಗೆ ಸಹಕರಿಸಿದವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ದೊಡ್ಡ ತಿಮಿಂಗಿಲವನ್ನು ವಶಕ್ಕೆ ಪಡೆದಿಲ್ಲ ಎಂದು ತಿಳಿಸಿದರು.

ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ, ಕಾನೂನು ಹೋರಾಟದಿಂದ ಹಿಂದೆ ಸರಿಯುವುದೂ ಇಲ್ಲ. ಆರೋಪಿಗಳಿಗೆ ಬುದ್ಧಿ ಕಲಿಸಬೇಕೆಂದರೆ ಎಲ್ಲರನ್ನೂ ಬಂಧಿಸಬೇಕು. ಸಾಕ್ಷ್ಯಾಧಾರಗಳನ್ನು ಖಾಸಗಿಯಾಗಿ ಸಂಗ್ರಹ ಮಾಡಲಾಗುತ್ತಿದೆ. ಯುವತಿ ಜತೆ ಇರುವ ಫೋಟೋಗಳು ಲಭ್ಯವಾಗಿವೆ. ಪಕ್ಕಾ ಎವಿಡೆನ್ಸ್ ಕಲೆಟ್ ಮಾಡಿ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.

Facebook Comments