ಭಾರತೀಯ ಚಿತ್ರರಂಗ ಕಂಡ ಸಂಗೀತ ಸಾಮ್ರಾಟರಿಗೆ 75 ನೆ ವಸಂತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4- ಭಾರತೀಯ ಚಿತ್ರರಂಗ ಕಂಡ ಮಹಾನ್ ಸಂಗೀತ ಸಾಮ್ರಾಟ, ಸ್ವರ ಮಾಂತ್ರಿಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಇಂದು 75 ನೆ ಜನ್ಮದಿನದ ಸಂಭ್ರಮ. ಭೌತಿಕವಾಗಿ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು 5 ದಶಕಗಳ ಕಾಲ ಸಂಗೀತ ಲೋಕದಲ್ಲಿ ಮಾಡಿರುವ ಸಾಧನೆಯನ್ನು ನೆನೆದು ಹಲವು ಸಂಗೀತ ಸಾಧಕರು, ಕಲಾವಿದರು ಮಹಾನ್ ಗಾಯಕ ಎಸ್ ಪಿಬಿಯ ಗುಣಗಾನ ಮಾಡಿದ್ದಾರೆ. ಕೇವಲ ಗಾಯಕರಾಗಿ ಮಾತ್ರವಲ್ಲದೆ ಸಂಗೀತ ನಿರ್ದೇಶಕರಾಗಿ, ನಿರ್ದೇಶಕರಾಗಿ, ನಟರಾಗಿಯೂ ಎಸ್ ಪಿಬಿ ಕಲಾಲೋಕಕ್ಕೆ ಕೊಟ್ಟ ಕೊಡುಗೆ ಅಪಾರ.

ಕರುನಾಡೇ ನನ್ನ ಜನ್ಮಭೂಮಿ:
16 ಭಾಷೆಗಳಲ್ಲಿ ತಮ್ಮ ಸ್ವರದ ಕಂಪನ್ನು ಪಸರಿಸಿರುವ ಎಸ್ ಪಿಬಿ 1946 ರ ಜೂನ್ 4 ರಂದು ಹರಿಕಥಾ ವಿದ್ವಾಂಸರ ಕುಟುಂಬ ದಲ್ಲಿ ಜನಿಸಿದವರು.
ಆಂಧ್ರದಲ್ಲಿ ಜನಿಸಿದರೂ ಕರುನಾಡೇ ತಮ್ಮ ಜನ್ಮಭೂಮಿ ಎನ್ನುತ್ತಿದ್ದ ಎಸ್ ಪಿಬಿ ಕನ್ನಡದ ಮೇರು ನಟರುಗಳಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಹಲವು ದಿಗ್ಗಜರಿಗೆ ದ್ವನಿ ಆಗಿದ್ದರು.ತೆಮಿಳು, ತೆಲುಗು, ಬಾಲಿವುಡ್ ನ ಸ್ಟಾರ್ ನಟರುಗಳಿಗೂ ಹಲವು ಹಿಟ್ ಗೀತೆಗಳನ್ನು ಹಾಡಿರುವ ಖ್ಯಾತಿ ಎಸ್ ಪಿಬಿಗೆ ಸಲ್ಲುತ್ತದೆ.

ಸಂಗೀತ ದಾಖಲೆ:
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರಿಗಾಗಿ 12 ಗಂಟೆಗಳಲ್ಲಿ ಎಸ್ ಪಿಬಿ 21 ಕನ್ನಡ ಗೀತೆಗಳನ್ನು ಹಾಡಿ ದಾಖಲೆ ನಿರ್ಮಿಸಿದ್ದಾರೆ. ತೆಲುಗು, ತಮಿಳಿನಲ್ಲಿ ಒಂದೇ ದಿನ 16, ಬಾಲಿವುಡ್ ನಲ್ಲಿ ಒಂದೇ ದಿನ 16 ಹಾಡುಗಳನ್ನು ಹಾಡಿದ ದಾಖಲೆ ಮಾಡಿರುವ ಎಸ್ ಪಿಬಿ 5 ದಶಕಗಳ ಕಾಲದಲ್ಲಿ 16 ಭಾಷೆ ಗಳ 45000 ಕ್ಕೂ ಗೀತೆಗಳನ್ನು ಹಾಡಿರುವುದರ ಜೊತೆ ಗೆ ಹಲವಾರು ಖಾಸಗಿ ಆಲ್ಬಂ ಗಾಳಿಗೂ ಇವರು ಹಾಡಿ ಗಮನ ಸೆಳೆದಿದ್ದಾರೆ

ಪ್ರಶಸ್ತಿಗಳ ಸುರಿಮಳೆ:
4 ಭಾಷೆ ಗಳಲ್ಲಿ 6 ರಾಷ್ಟ್ರ ಪ್ರಶಸ್ತಿ ಪಡೆದಿರುವ ಏಕಮೇವ ಗಾಯಕ ಎಂಬ ಖ್ಯಾತಿ ಗಳಿ‌ಸಿರುವ ಎಸ್ ಪಿಬಿ, ಬಾಲಿವುಡ್ ನ ಫಿಲ್ಮ್ ಫೇರ್ ಪ್ರಶಸ್ತಿ, 25 ನಂದಿ ಪ್ರಶಸ್ತಿ, 2001 ರಲ್ಲಿ ಪದ್ಮಶ್ರೀ, 2011 ರಲ್ಲಿ ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಹಾರಿಸಿಕೊಂಡು ಬಂದಿದೆ.

25 ಸೆಪ್ಟೆಂಬರ್ 2020ರಂದು ಸ್ವರ ಸಾಧಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಇಹಲೋಕ ಯಾತ್ರೆ ಮುಗಿಸಿದರೂ ಅವರು ಸೃಷ್ಟಿಸಿರುವ ಅಪಾರ ಸಂಗೀತ ಸಾಧಕರು, ಎಸ್ಪಿಬಿ ಅವರು ನಡೆಸಿಕೊಟ್ಟ ಎದೆ ತುಂಬಿ ಹಾಡಿದೆನು ಎಂಬ ಕಾರ್ಯಕ್ರಮದಂತೆ ಅವರ ಹೆಸರು ಸದಾ ಸಂಗೀತ ಪ್ರೇಮಿಗಳ ಎದೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತದೆ.

Facebook Comments