ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ, ಕಾಂಗ್ರೆಸ್‌ಗೆ ಸ್ಪಷ್ಟಬಹುಮತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಭಾರೀ ಜಿದ್ದಾ ಜಿದ್ದಿನಿಂದ ಕೂಡಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತ ಪಡೆದಿದ್ದು,ಬಿಜೆಪಿಗೆ ಮುಖಭಂಗವಾಗಿದೆ. ಒಟ್ಟು 39 ವಾಡ್9ಗಳ ಪೈಕಿ ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 20 ವಾಡ್9ಗಳಲ್ಲಿ ಗೆಲುವು ಸಾಧಿಸಿದೆ.

ಭಾರೀ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿ ‌ಕೇವಲ 14 ವಾಡ್9ಗಳಲ್ಲಿ ಗೆಲುವು ಕಂಡಿದೆ.5 ಕಡೆ ಬಂಡಾಯ ಅಭ್ಯರ್ಥಿಗಳು ವಿಜಯದ ಪಾತಾಕಿ ಹಾರಿಸಿದ್ದಾರೆ. ವಿಶೇಷ ಎಂದರೆ 5 ವಾಡ್9 ಗಳಲ್ಲಿ ಗೆಲುವು ಸಾಧಿಸಿರುವವರು ಕಾಂಗ್ರೆಸ್ ಬಂಡಾಯ ‌ಅಭ್ಯರ್ಥಿಗಳು.

ಇಲ್ಲಿನ ‌ಮಹಾನಗರ ಪಾಲಿಕೆ ಚುನಾವಣೆಯನ್ನು ಸಚಿವ ಶ್ರೀರಾಮುಲು ಮತ್ತು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಪ್ರತಿಷ್ಡೆಯಾಗಿ‌ ತೆಗೆದುಕೊಂಡಿದ್ದರು. ಈ ಇಬ್ಬರೂ ಕೋವಿಡ್ ಸಂದರ್ಭದಲ್ಲೂ ‌ಭರ್ಜರಿ‌ಪ್ರಚಾರ ನಡೆಸಿದ್ದರು.ಆದರೆ, ಫಲಿತಾಂಶದಲ್ಲಿ ಪಕ್ಷಕ್ಕೆ ‌ಹಿನ್ನಡೆಯಾಗಿರುವುದು ಸ್ವತಃ ರಾಮುಲು ಮತ್ತು ‌ರೆಡ್ಡಿ ಸಹೋದರರಿಗೆ ಮುಖಭಂಗ ಎಂದೇ ವ್ಯಾಖ್ಯಾನಿಸಲಾಗಿದೆ.

ರಾಮುಲು ಹಾಗೂ ಸೋಮಶೇಖರ ರೆಡ್ಡಿಗೆ ಸಡ್ಡು ಹೊಡೆಯುವಂತೆ ಶಾಸಕ‌ ಬಿ.ನಾಗೇಂದ್ರ ತೆರೆಮರೆಯಲ್ಲೇ ಕುಳಿತು ಕಾಯ9ತಂತ್ರ ರೂಪಿಸಿದ್ದರು.ಇದೀಗ ಪಾಲಿಕೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿರುವುದು ರಾಮುಲು ಮತ್ತು ‌ರೆಡ್ಡಿ‌ ಸಹೋದರರಿಗೆ ಭವಿಷ್ಯದಲ್ಲಿ ನಾಗೇಂದ್ರ ಬಳ್ಳಾರಿಯಲ್ಲಿ ಪ್ರಬಲರಾಗುವ ಮುನ್ಸೂಚನೆ ಫಲಿತಾಂಶದಿಂದ ಸಿಕ್ಕಿದೆ.

# ಬಳ್ಳಾರಿ ಮಹಾನಗರ ಪಾಲಿಕೆ
ಒಟ್ಟು ವಾಡ್9ಗಳು – 39
ಕಾಂಗ್ರೆಸ್ – 20
ಬಿಜೆಪಿ – 14
ಪಕ್ಷೇತರರು -05

# ಶಾಸಕರ ಪುತ್ರ ಸೋಲು :
ಬಳ್ಳಾರಿ ನಗರಸಭೆಯಲ್ಲಿ ಶಾಸಕರ ಪುತ್ರ ಸೋಲು ಕಂಡಿದ್ದರೆ, 22 ವರ್ಷದ ಯುವತಿಯೊಬ್ಬರು ಕಾಂಗ್ರೆಸ್‍ನಿಂದ ಗೆದ್ದಿದ್ದಾರೆ. ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ್ ರೆಡ್ಡಿ ಅವರ ಅಬ್ಬರದ ಪ್ರಚಾರದ ಹೊರತಾಗಿಯೂ ಬಿಜೆಪಿ ಅಧಿಕಾರ ಹಿಡಿಯಲು ವಿಫಲವಾಗಿದೆ. ಶಾಸಕ ಸೋಮಶೇಖರ್ ರೆಡ್ಡಿ ಅವರ ಪುತ್ರ ಜಿ.ಶ್ರವಣಕುಮಾರ್ ರೆಡ್ಡಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ನಂದೀಶ್ 133 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

4ನೇ ವಾರ್ಡ್‍ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ 22 ವರ್ಷದ ತ್ರೀವೇಣಿ ಗೆಲುವು ಸಾಧಿಸಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲೇ ಗೆಲುವು ಸಾಧಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್ ಟಿಕೆಟ್ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ 3ನೇ ವಾರ್ಡ್ನ್ ಎಂ.ಪ್ರಭಂಜನ್ ಕುಮಾರ್, 15ನೇ ವಾರ್ಡ್‍ನ ನೂರ್‍ಮಹ್ಮದ್, 17ನೇ ವಾರ್ಡ್‍ನ ಕವಿತಾ ಕೆ.ಹೊನ್ನಪ್ಪ, 32ನೇ ವಾರ್ಡ್‍ನ ಮಂಜುಳಾ, 35ನೇ ವಾರ್ಡ್‍ನ ವಿ.ಶ್ರೀನಿವಾಸಲು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

Facebook Comments

Sri Raghav

Admin