ಶೌರ್ಯಚಕ್ರ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಹತ್ಯೆ: ಪರಿಸ್ಥಿತಿ ಉದ್ವಿಗ್ನ

ಈ ಸುದ್ದಿಯನ್ನು ಶೇರ್ ಮಾಡಿ

ಅಮೃತಸರ,ಅ.17- ಪಂಜಾಬ್‍ನಲ್ಲಿ ನಿನ್ನೆ ಸಂಜೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಮಾಜಿ ವೀರ, ಯೋಧ ಮತ್ತು ಶೌರ್ಯಚಕ್ರ ಪ್ರಶಸ್ತಿ ಪುರಸ್ಕøತ ಬಲ್ವಿಂದರ್ ಸಿಂಗ್ ಸಂದು(62) ಅವರ ಹಂತಕರನ್ನು ಬಂಧಿಸುವ ತನಕ ಅವರ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಕುಟುಂಬ ಸದಸ್ಯರು ಮತ್ತು ಬಂಧುಮಿತ್ರರು ಪಟ್ಟು ಹಿಡಿದಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಪಂಜಾಬ್‍ನ ತರನ್‍ತರನ್ ನಗರದ ಬಿಕಿವಿಂಡಿ ಪ್ರದೇಶದಲ್ಲಿ ತಮ್ಮ ಮನೆಗೆ ಹೊಂದಿಕೊಂಡಿರುವ ಕಚೇರಿಯಲ್ಲಿದ್ದಾಗ ಮೋಟಾರ್‍ಸೈಕಲ್‍ನಲ್ಲಿ ಬಂದ ದುಷ್ಕರ್ಮಿಗಳು ಬಲ್ವಿಂದರ್ ಸಿಂಗ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಕಳೆದ ತಿಂಗಳಷ್ಟೇ ಸರ್ಕಾರ ಬಲ್ವಿಂದರ್ ಸಿಂಗ್‍ಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಸಿಂಗ್ ಹತ್ಯೆಯಿಂದ ತರನ್‍ತರನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಪಂಜಾಬ್‍ನಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ದುಷ್ಟರನ್ನು ನಿಗ್ರಹಿಸಿದ ಸಾಹಸಕ್ಕಾಗಿ ಸಿಂಗ್ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Facebook Comments