ಬ್ರೇಕಿಂಗ್ : ಸೇನೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಮಹತ್ವದ ಘೋಷಣೆ, ಇಲ್ಲಿದೆ ಡೀಟೈಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.9-ದೇಶೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಮೂಲಕ ಘಾರತದ ಮೂರು ಸಶಸ್ತ್ರ ಪಡೆಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಒಟ್ಟು 1 ಲಕ್ಷ 40 ಸಾವಿರ ಕೋಟಿ ರೂ.ಗಳ ಮೊತ್ತದ 101 ರಕ್ಷಣಾ ಉತ್ಪನ್ನಗಳನ್ನು ದೇಶದಲ್ಲೇ ತಯಾರಿಸುವ ಮಹತ್ವದ ಘೋಷಣೆ ಹೊರಡಿಸಿದೆ.

ಪ್ರಸಕ್ತ ಹಣಕಾಸು ಸಾಲಿನಲ್ಲಿ ರಕ್ಷಣಾ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ದೇಶೀಯವಾಗಿದ ಉತ್ಪಾದಿಸಲು 52,000 ಕೋಟಿ ರೂ.ಗಳ ಬಂಡವಾಳವನ್ನು ಮೀಸಲಿಡಲಾಗುವುದು.

ಭಾರತದ ಮೂರು ರಕ್ಷಣಾ ಪಡೆಗಳಿಗೆ ಬೇಕಾಗುವ ಯುದ್ಧ ಟ್ಯಾಂಕ್‍ಗಳು, ಆಸಲ್ಟ್ ರೈಫಲ್‍ಗಳು, ಆರ್ಟಿಲರಿ ಗನ್‍ಗಳು, ಲಘು ಸಮರ ಹೆಲಿಕಾಪ್ಟರ್‍ಗಳು, ಸರಕು ಸಾಗಣೆ ವಿಮಾನಗಳು, ಕ್ಷಿಪಣಿಗಳು, ಸಬ್ ಮರೀನ್‍ಗಳು, ಟಾರ್ಪೆಡೊಗಳು, ರೇಡಾರ್, ಸೋನಾರ್ ಉಪಕರಣಗಳು, ದೂರಸಂಪಕ ಸಾಧನಗಳು ಸೇರಿದಂತೆ ಒಟ್ಟು 101 ಮಿಲಿಟರಿ ಸಾಮಗ್ರಿಗಳನ್ನು ಮೊದಲ ಹಂತದಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತದೆ. ಇದಕ್ಕಾಗಿ ಒಟ್ಟು 1 ಕೋಟಿ 40 ಸಾವಿರ ಕೋಟಿ ರೂ.ಗಳಷ್ಟು ವೆಚ್ಚವಾಗುತ್ತದೆ.

ಭೂಸೇನೆ, ವಾಯುಪಡೆ ಮತ್ತು ನೌಕಾದಳಗಳಿಗೆ ಅಗತ್ಯವಾಗಿ ಬೇಕಾಗಿರುವ ಅತ್ಯಾಧುನಿಕ ಯದ್ಧಾಸ್ತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು ಆತ್ಮನಿರ್ಭರ್ ಭಾರತ್ ಯೋಜನೆ ಅಡಿ ದೇಶೀಯವಾಗಿಯೇ ಉತ್ಪಾದಿಸುವ ಉಪಕ್ರಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಘೋಷಿಸಿದರು.

ವಿವಿಧ ದೇಶಗಳಿಂದ ಈವರೆಗೆ ಆಮದು ಮಾಡಿಕೊಳ್ಳಲಾಗುತ್ತಿದ್ದ 101 ಸೇನಾ ಸಾಮಗ್ರಿಗಳಿಗೆ ನಿರ್ಬಂಧ ವಿಸಿ ಅವುಗಳನ್ನು ದೇಶದಲ್ಲೇ ತಯಾರಿಸಲಾಗುವುದು. ಇದರಿಂದ ರಕ್ಷಣಾ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ದೊರೆಯುವ ಜೊತೆಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಮೊದಲ ಹಂತವಾಗಿ 101 ರಕ್ಷಣಾ ಸಾಮಗ್ರಿಗಳಿಗೆ ವಿದೇಶಿ ಅಮದು ದಿಗ್ಬಂಧನ ವಿಸಲಾಗಿದ್ದು, ಹಂತಹಂತವಾಗಿ ಮತ್ತಷ್ಟು ಯುದ್ಧೋಪಕರಣಗಳನ್ನು ದೇಶೀಯವಾಗಿಯೇ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ರಕ್ಷಣಾ ಸಚಿವರು ವಿವರಿಸಿದರು.

ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ರಕ್ಷಣಾ ಇಲಾಖೆಗೆ ಮೀಸಲಿಡಬೇಕಾದ ದೇಶೀಯ ಬಂಡವಾಳ ಮತ್ತು ವಿದೇಶಿ ಹೂಡಿಕೆಯನ್ನು ವಿಂಗಡಿಸಿದೆ. ಅದರ ಅನ್ವಯ ಈ ಸಾಲಿನಲ್ಲಿ ದೇಶೀಯ ಉತ್ಪಾದನೆಗಾಗಿ 52,000 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅವರು ತಿಳಿಸಿದರು.

ರಕ್ಷಣಾ ಇಲಾಖೆಯ ಮತ್ತಷ್ಟು ಉತ್ನನ್ನಗಳನ್ನು ಹಂತ ಹಂತವಾಗಿ ದೇಶೀಯವಾಗಿಯೇ ಉತ್ಪಾದಿಸಲಾಗುವುದು. ಅವುಗಳ ಪಟ್ಟಿಯನ್ನು ಸಿದ್ದಪಡಿಸಿ ಕಾಲಮಿತಿಯೊಳಗೆ ಅವುಗಳ ಉತ್ಪಾದನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.

ಆತ್ಮ ನಿರ್ಬರ್ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಕ್ಷಣಾ ಇಲಾಖೆಯಲ್ಲಿಯೂ ಇವುಗಳಿಗೆ ಆದ್ಯತೆ ನೀಡುವ ಮೂಲಕ ದೇಶೀಯ ಉತ್ಪಾದನೆ ಮತ್ತು ರಕ್ಷಣಾ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಲಾಗುವುದು ಎಂದು ಸಿಂಗ್ ತಿಳಿಸಿದರು.

Facebook Comments

Sri Raghav

Admin