ಮೊಬೈಲ್ ಕೊಡಿಸದ ಅಜ್ಜಿಯ ಕತ್ತನ್ನೇ ಕತ್ತರಿಸಿದ ಮೊಮ್ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.16- ಡ್ರಗ್ಸ್‍ಗೆ ದಾಸನಾಗಿದ್ದ ದುಷ್ಟ ಯುವಕನೊಬ್ಬ ಮೊಬೈಲ್ ಗಿಫ್ಟ್ ಕೊಡದ ಅಜ್ಜಿಯ ಕತ್ತು ಸೀಳಿ, ನಂತರ ತಲೆಯನ್ನು ತುಂಡರಿಸಿ ಊಟದ ಟೇಬಲ್ ಮೇಲಿಟ್ಟು ವಿಕೃತಿ ಮೆರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಪಶ್ಚಿಮ ಬಾಂದ್ರಾದ ಕ್ರಿಸ್ಟೋಫರ್ ಡಯಾಸ್ (24) ಎಂಬುವವನೇ ಅಜ್ಜಿಯ ಕತ್ತು ಸೀಳಿ ವಿಕೃತಿ ಮೆರೆದಿರುವ ಪಾಪಿ ಮೊಮ್ಮಗ. ಕ್ರಿಸ್ಟೋಫರ್ ಡ್ರಗ್ಸ್ ದಾಸನಾಗಿದ್ದು ಅವನನ್ನು ಚಟದಿಂದ ಬಿಡಿಸಲು ಥಾಣೆಯ ರೆಹಾಬ್ ಸೆಂಟರ್‍ನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಇತ್ತೀಚೆಗೆ ಅವನನ್ನು ಮನೆಗೆ ಕರೆತಂದಿದ್ದರು.

ಕ್ರಿಸ್ಟೋಫರ್ ತನ್ನ ಅಜ್ಜಿ ರೋಸಿಯೊಂದಿಗೆ ನೆಲಮಹಡಿಯಲ್ಲಿ ವಾಸವಿದ್ದರೆ ಆತನ ಪೋಷಕರು ಮೊದಲ ಮಹಡಿಯಲ್ಲಿದ್ದರು.
ನಿನ್ನೆ ರಾತ್ರಿ ಊಟ ಮುಗಿದ ನಂತರ ಆರೋಪಿ ಕ್ರಿಸ್ಟೋಫರ್ ತನಗೆ ಮೊಬೈಲ್ ಅನ್ನು ಗಿಫ್ಟ್ ರೂಪದಲ್ಲಿ ಕೊಡಿಸಲು ಕೇಳಿದ್ದಾನೆ ಅದಕ್ಕೆ ಅಜ್ಜಿ ನಿರಾಕರಿಸಿದ್ದರಿಂದ ಕುಪಿತಗೊಂಡ ಆತ ಅಜ್ಜಿ ಮಲಗಿದ ನಂತರ ಆಕೆಯ ಕತ್ತು ಕತ್ತರಿಸಿ ನಂತರ ತಲೆಯನ್ನು ತುಂಡರಿಸಿ ಡೈನಿಂಗ್ ಟೇಬಲ್ ಮೇಲಿಟ್ಟು ವಿಕೃತಿ ಮೆರೆದಿದ್ದಾನೆ.

ಇಂದು ಬೆಳಗ್ಗೆ ಕ್ರಿಸ್ಟೋಫರ್ ತಮ್ಮ ಬಂದು ನೋಡಿದಾಗ ಅಜ್ಜಿಯನ್ನು ಕೊಂದಿರುವ ವಿಷಯ ಬೆಳಕಿಗೆ ಬಂದಿದೆ, ತಕ್ಷಣ ಆತನ ಪೆÇೀಷಕರಿಗೆ ತಿಳಿಸಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಬಾಂದ್ರಾ ಪೆÇಲೀಸರು ಕ್ರಿಸ್ಟೋಫರ್‍ನನ್ನು ಅಜ್ಜಿ ರೋಸಿಯ ಕೊಲೆ ಆರೋಪದ ಮೇಲೆ ಬಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Facebook Comments

Sri Raghav

Admin