ಕಸದ ತೊಟ್ಟಿಯಾದ ಮರ ರಕ್ಷಕಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.12- ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಬಿಎಂಪಿ ಕೂಡ ಎಲ್ಲೆಂದರಲ್ಲಿ ಕಸ ಎಸೆದರೆ, ಪ್ಲಾಸ್ಟಿಕ್ ಬಳಕೆ ಮಾಡಿದರೆ ಭಾರೀ ಪ್ರಮಾಣದ ದಂಡ ವಿಧಿಸಲು ಮುಂದಾಗಿದೆ. ಆದರೂ ಸಿಲಿಕಾನ್ ಸಿಟಿಯ ನಾಗರಿಕರಿಗೆ ಮಾತ್ರ ಬುದ್ಧಿ ಬಂದಿಲ್ಲ.

ಮತದಾನ ಮಾಡಲು ಮುಂದೆ ಬಾರದ ಪ್ರಜ್ಞಾವಂತ ಬೆಂಗಳೂರು ನಾಗರಿಕರಿಗೆ ಸಮರ್ಪಕ ಕಸ ವಿಲೇವಾರಿ ಬಗ್ಗೆಯೂ ಪರಿಜ್ಞಾನವಿಲ್ಲ. ಬಿಬಿಎಂಪಿ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೂ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಇಲ್ಲಿನ ಮಂದಿ ಮರಗಳ ರಕ್ಷಣೆಗಾಗಿ ಪಾಲಿಕೆ ನಿರ್ಮಿಸಿರುವ ಮರ ರಕ್ಷಕಗಳನ್ನೇ ಕಸದ ತೊಟ್ಟಿಗಳನ್ನಾಗಿ ಮಾಡಿಕೊಂಡಿದ್ದಾರೆ.

ಈಗಾಗಲೇ ನಗರದಲ್ಲಿ ಮಾರಣಾಂತಿಕ ರೋಗಗಳು ಲಗ್ಗೆಯಿಟ್ಟಿವೆ. ಇಂತಹ ಅನಾರೋಗ್ಯ ವಾತಾವರಣದಿಂದ ಮುಕ್ತಿಗೊಳ್ಳಬೇಕಾದರೆ ನಾಗರಿಕರು ಇನ್ನು ಮುಂದಾದರೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ.

Facebook Comments