ಭದ್ರಪ್ಪ ಲೇಔಟ್ ಅಧ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.5-ನಗರದ ಭದ್ರಪ್ಪ ಲೇಔಟ್ ಮುಖ್ಯರಸ್ತೆ ಹಾಗೂ ದೇವಿನಗರ ರಿಂಗ್ ರಸ್ತೆಗಳು ದೊಡ್ಡ ಹೊಂಡಗಳಾಗಿ ಮಾರ್ಪಾಡಾಗಿದ್ದು ಕೆರೆಯಂ ತಾಗಿವೆ. ಈ ಭಾಗದಲ್ಲಿ ಸಂಚರಿಸಲು ವಾಹನ ಸವಾರರ ಪಡಿಪಾಲು ಹೇಳತೀರದು.  ಭದ್ರಪ್ಪ ಲೇಔಟ್ ಆಗಲಿ, ದೇವಿನಗರವಾಗಲಿ ಯಾವುದೊ ಹಳ್ಳಿಕೊಂಪೆಯಲಿಲ್ಲ ರಾಜ್ಯದ ರಾಜಧಾನಿಯಲ್ಲೇ ಇರುವ ಬಡಾವಣೆಗಳು.

ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಲೇ ಇದ್ದು, ಗುಣಮಟ್ಟ ಇಲ್ಲದ ಕಾರಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ದೊಡ್ಡ ಹೊಂಡಗಳಾಗಿದ್ದು, ಕೆರೆ ಯಂತೆ ನೀರು ತುಂಬಿಕೊಂಡಿದೆ. ಅಲ್ಲದೆ ರಸ್ತೆಯಲ್ಲಿ ಜಲ್ಲಿಕಲ್ಲುಗಳು ರಾರಾಜಿಸುತ್ತಿವೆ. ನಿಜಕ್ಕೂ ಈ ರಸ್ತೆಯಲ್ಲಿ ಜೀವ ಕೈನಲ್ಲೆ ಹಿಡಿದೇ ಸಾಗಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ನೀರಿನ ಹೊಂಡದಲ್ಲಿ ಬಿದ್ದು ಅನಾಹುತವಾಗುವುದು ಕಟ್ಟಿಟ್ಟ ಬುತ್ತಿ.

ಇನ್ನು ದ್ವಿಚಕ್ರವಾಹನ ನೂರಾರು ಜಲ್ಲಿಕಲ್ಲು ತುಂಬಿರುವ ರಸ್ತೆಯಲ್ಲಿ ಸಾಗುವಾಗ ಜಾರಿಬಿದ್ದು ಗಾಯಗೊಂಡ ಉದಾಹರಣೆ ಸಾಕಷ್ಟಿವೆ. ಪ್ರತಿದಿನ ಈ ಭಾಗದಲ್ಲಿ ಸಾಗುವ ಜನರು ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾರೆ. ಹೆಚ್ಚಿನ ಅನಾಹುತವಾಗುವ ಮುನ್ನ ಪಾಲಿಕೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೆಬ್ಬಾಳ: ಭದ್ರಪ್ಪ ಲೇಔಟ್, ದೇವಿನಗರ ರಸ್ತೆಗಳಂತೆಯೇ ಹೆಬ್ಬಾಳ ರಿಂಗ್‍ರಸ್ತೆ ಕೂಡ ಜಲಾವೃತವಾಗಿ ಬಿಟ್ಟಿದೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೆಬ್ಬಾಳ ರಿಂಗ್‍ರಸ್ತೆಯ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿ ಬಿಟ್ಟಿದೆ.  ಇದರಿಂದ ಪ್ರಯಾಣಿಕರು ಹತ್ತುವುದಕ್ಕಾಗಲಿ, ಇಳಿಯುವುದ ಕ್ಕಾಗಲಿ ತೀವ್ರ ತೊಂದರೆಯಾಗಿದೆ.

Facebook Comments