ಬೆಂಗಳೂರಿಗೆ ಹೊಸ ಮಾರ್ಗಸೂಚಿ: ಪಾರ್ಕ್, ಚಿತ್ರಮಂದಿರ, ಧಾರ್ಮಿಕ ಕೇಂದ್ರ ಬಂದ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.19- ರಾಜಧಾನಿ ಬೆಂಗಳೂರಿ ನಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಇಂದಿನಿಂದಲೇ ಜಾರಿಯಾಗುವಂತೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಿದೆ. ಮೇ ತಿಂಗಳ ಅಂತ್ಯದವರೆಗೂ ಅನ್ವಯವಾಗುವಂತೆ ಬೆಂಗಳೂರಿನಲ್ಲಿ ಬಿಗಿಯಾದ ನಿಯಮಗಳು ಜಾರಿಯಾಗಲಿದ್ದು, ರಾತ್ರಿ ಕಫ್ರ್ಯೂ ಸಮಯ ರಾತ್ರಿ 8 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ವಿಸ್ತರಣೆಯಾಗಲಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ಮೇರೆಗೆ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರು ಪ್ರತಿನಿಸುವ ಸಂಸದರು, ರಾಜ್ಯಸಭಾ ಸದಸ್ಯರು,
ಶಾಸಕರ ಸಭೆಯಲ್ಲಿ ಈ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ವಿಶೇಷವೆಂದರೆ ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿರುವ ಸಿಎಂ ಯಡಿಯೂರಪ್ಪ ಕೂಡ ವಿಡಿಯೋ ಕಾನರೆನ್ಸ್ ಮೂಲಕ ಜನಪ್ರತಿನಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾದರೂ ಸರಿಯೇ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ಒಲ್ಲದ ಮನಸ್ಸಿನಿಂದಲೇ ಮುಕ್ತವಾಗುವ ಸಾಧ್ಯತೆ ಇದೆ.  ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಜಾರಿಗೊಳಿಸಲು ಕೆಲವು ಸಚಿವರು ಮತ್ತು ಶಾಸಕರು ಸಿಎಂಗೆ ಮನವಿ ಮಾಡಲಿದ್ದಾರೆ.

ಆದರೆ ಇದಕ್ಕೆ ಬಿಎಸ್‍ವೈ ಸುತಾರಾಂ ಒಪ್ಪುತ್ತಿಲ್ಲ. ಲಾಕ್‍ಡೌನ್ ಜಾರಿಯಿಂದ ಆರ್ಥಿಕ ವಹಿವಾಟಿನ ಮೇಲೆ ಪರಿಣಾಮ ಬೀರುವುದರಿಂದ ಪರ್ಯಾಯ ಮಾರ್ಗವನ್ನು ತಿಳಿಸಬೇಕೆಂದು ಈಗಾಗಲೇ ಸೂಚನೆ ನೀಡಿದ್ದಾರೆ. ಖುದ್ದು ಕಂದಾಯ ಸಚಿವ ಆರ್.ಅಶೋಕ್ ಕೂಡ ಈಗಾಗಲೇ ಬೆಂಗಳೂರಿಗೆ ಲಾಕ್‍ಡೌನ್ ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದರಿಂದ ನಗರಕ್ಕೆ ಸೀಮಿತವಾಗಿ ಕಠಿಣ ನಿಯಮಗಳು ಜಾರಿಗೆ ಬರುವ ಸಾಧ್ಯತೆ ನಿಚ್ಚಳವಾಗಿದೆ.

ಶಾಲಾ-ಕಾಲೇಜು, ಶಾಪಿಂಗ್ ಮಾಲ್, ಬೀದಿಬದಿ ವ್ಯಾಪಾರ, ಸೂಪರ್ ಮಾರ್ಕೆಟ್, ಜಾತ್ರೆ, ಸಭೆ-ಸಮಾರಂಭಗಳು, ಮದುವೆ, ಕಲ್ಯಾಣ ಮಂಟಪ, ಪ್ರವಾಸಿ ತಾಣ, ದೇಗುಲ, ಮಸೀದಿ, ಚರ್ಚ್, ಆಟದ ಮೈದಾನಗಳು, ಶಾಪಿಂಗ್‍ಮಾಲ್, ಪಬ್, ಡಿಸ್ಕೊತೆಕ್, ಸ್ವಿಮ್ಮಿಂಗ್‍ಪೂಲ್, ಸಿನಿಮಾ ಮಂದಿರಗಳು, ಪ್ರವಾಸಿ ತಾಣಗಳು, ಜಿಮ್ ಸೇರಿದಂತೆ ಸಾರ್ವಜನಿಕರು ಒಂದೆಡೆ ಸೇರುವ ಸ್ಥಳಗಳು ಬಂದ್ ಆಗುವ ಲಕ್ಷಣಗಳಿವೆ.

ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣವಾದ ಕ್ರಮಗಳನ್ನು ತೆಗೆದುಕೊಂಡಿರುವ ಮಾದರಿಯಲ್ಲಿ ವೀಕೆಂಡ್ ಲಾಕ್‍ಡೌನ್ ಜಾರಿಗೊಳಿಸಲು ಕೆಲವರು ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.

ಲಾಕ್‍ಡೌನ್ ಜಾರಿಯಾದರೆ ಸಾರ್ವಜನಿಕರ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ. ಮಧ್ಯಮ ವರ್ಗದವರು ಮೊದಲೇ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಪುನಃ ಲಾಕ್‍ಡೌನ್ ಜಾರಿ ಮಾಡಿದರೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾರೆ. ಲಾಕ್‍ಡೌನ್ ಬದಲಿಗೆ ಹಿಂದಿಗಿಂತಲೂ ಕಠಿಣವಾದ ನಿಯಮಗಳನ್ನು ಜಾರಿಗೊಳಿಸಲು ಸಭೆ ತೀರ್ಮಾನಿಸುವ ಸಾಧ್ಯತೆಯಿದೆ.

ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ?:
* ಬೆಂಗಳೂರಿನಲ್ಲಿ ಜನರ ಓಡಾಡಕ್ಕೆ ಸಂಪೂರ್ಣ ನಿರ್ಬಂಧ
* ತುರ್ತು ಕೆಲಸಗಳಿಗೆ ಮಾತ್ರ ಜನರ ಓಡಾಟಕ್ಕೆ ಅವಕಾಶ
* ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ
* ಅಗತ್ಯ ಸೇವೆಗಳ ವಾಹನ ಸಂಚಾರಕ್ಕೆ ಮಹಾರಾಷ್ಟ್ರ ಮಾದರಿ ಸ್ಟಿಕ್ಕರ್
* ಬೆಂಗಳೂರಿನಿಂದ ಹೋಗುವ, ಬರುವವರ ಮೇಲೆ ನಿರ್ಬಂಧ
* ಬಾರ್, ಪಬ್, ಮಾಲ್, ದೇವಸ್ಥಾನಗಳು ಸಂಪೂರ್ಣ ಬಂದ್
* ಸಿನಿಮಾ ಹಾಲ್, ಜಿಮ್, ಈಜುಕೊಳ ಬಂದ್
* ಸಭೆ, ಸಮಾರಂಭಗಳಿಗೆ ನಿರ್ಬಂಧ. ಮದುವೆಗೆ ಪಾಸ್ ಕಡ್ಡಾಯ.
* ಜಾತ್ರೆ, ವಿಶೇಷ ಸಮಾರಂಭಗಳಿಗೆ ಬ್ರೇಕ್.
* ಅಗತ್ಯ ಸೇವೆಗಳ ಕಚೇರಿಗಳಲ್ಲಿ 50% ಉದ್ಯೋಗಿಗಳ ಹಾಜರಿ
* ಖಾಸಗಿ ಕಂಪನಿಗಳಿಗೆ ವರ್ಕ್ ಫ್ರಮ್ ಹೋಂ ನಿಯಮ ಜಾರಿ

* ಈಗ ಜಾರಿಯಾಗಿರುವ ಕೊರೊನಾ ಕಫ್ರ್ಯೂ ಮುಂದುವರಿಕೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ಕೊರೊನಾ ಕಫ್ರ್ಯೂ ಮುಂದುವರಿಕೆ.
* ಮಾರ್ಕೆಟ್ ವಿಕೇಂದ್ರೀಕರಣಕ್ಕೆ ಬಹುತೇಕ ಪಕ್ಕಾ. ಬೆಂಗಳೂರಿನಲ್ಲಿ ಹಣ್ಣು ತರಕಾರಿ ಮಾರ್ಕೆಟ್ ವಿಕೇಂದ್ರೀಕರಣಕ್ಕೆ ನಿರ್ಧಾರ.
* ಕೆ.ಆರ್.ಮಾರ್ಕೆಟ್‍ನ್ನು ಮೂರು ಅಥವಾ ನಾಲ್ಕು ಮಾರ್ಕೆಟ್‍ಗಳನ್ನಾಗಿ ಪರಿವರ್ತಿಸಲು ನಿರ್ಧಾರ. ನ್ಯಾಷನಲ್ ಕಾಲೇಜು ಮೈದಾನ, ಎಪಿಎಸ್ ಕಾಲೇಜು ಮೈದಾನ, ಚಾಮರಾಜಪೇಟೆ ಭಾಗಗಳಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ನಿರ್ಧಾರ ಸಾಧ್ಯತೆ.
* ಇದೇ ರೀತಿ ಉತ್ತರ, ಪೂರ್ವ ಹಾಗೂ ಪಶ್ಚಿಮ ಬೆಂಗಳೂರಿನಲ್ಲಿ ಮಾರ್ಕೆಟ್ ಸ್ಥಳಾಂತರ.
* ಮಾಂಸದ ಅಂಗಡಿಗಳಿಗೆ ಸಮಯ ನಿಗದಿ.
* ಸಿನಿಮಾ ಮಂದಿರಗಳು ಏ.21ರಿಂದ ಬಂದ್ ನಿಶ್ಚಿತ.
* ಜಿಮ್‍ಗಳಿಗೆ ಕೊಟ್ಟಿರುವ ಶೇ.50% ರಷ್ಟು ಅವಕಾಶ ಹಿಂಪಡೆಯಲು ನಿರ್ಧಾರ.
* ಅಗತ್ಯ ಸೇವೆಗಳಿಗೆ ಹೊರತುಪಡಿಸಿ, ಹೊಟೇಲ್, ಬಾರ್ ಹಾಗೂ ರೆಸ್ಟೋರೆಂಟ್‍ಗಳಲ್ಲಿ ಸೇವೆ ಸ್ಥಗಿತ ಮಾಡುವುದು. ಜೊತೆಗೆ ಪಾರ್ಸೆಲ್‍ಗೆ ಅವಕಾಶ.
* ವಾರ್ಡ್ ಮಟ್ಟದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ನಿರ್ಧಾರ.
* ಮೊಬೈಲ್ ಆ್ಯಂಬುಲೆನ್ಸ್‍ಗಳನ್ನು ವಾರ್ಡ್‍ಗೆ ಎರಡೆರಡು ನೀಡಲು ತೀರ್ಮಾನ.
* 45 ವರ್ಷಮೇಲ್ಪಟ್ಟವರಿಗೆ ಲಸಿಕೆ ಕಡ್ಡಾಯ.
* ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಜೈಷನ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಅಗತ್ಯ.

ನಿಯಮ ಸಡಿಲಿಕೆ?
* ಹಾಲು, ತರಕಾರಿ, ದಿನಸಿ ಅಂಗಡಿಗಳಿಗೆ ಸಮಯ ನಿಗದಿ
* ಬೆಳಗ್ಗೆ ಕೆಲ ಗಂಟೆ, ಸಂಜೆ ಕೆಲ ಗಂಟೆ ಟಫ್ ನಿಯಮದಿಂದ ವಿನಾಯ್ತಿ
* ಹೋಟೆಲ್, ರೆಸ್ಟೋರೆಂಟ್‍ಗೆ ಸಮಯ ನಿಗದಿ, ಪಾರ್ಸೆಲ್‍ಗೆ ಅವಕಾಶ.
* ಆಸ್ಪತ್ರೆ, ಮೆಡಿಕಲ್ ಸ್ಟೋರ್‍ಗಳು ಯಥಾಸ್ಥಿತಿ
* ಪಾರ್ಕ್ ಪ್ರವೇಶಕ್ಕೆ ಸಮಯ ನಿಗದಿ
* ಎಲ್ಲಾ ರೀತಿಯ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ

Facebook Comments