ಬೆಂಗಳೂರು ಉಸ್ತುವಾರಿ ನೇಮಕದ ಬಗ್ಗೆ ಕಾದು ನೋಡಿ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ.ಅ.12- ಬೆಂಗಳೂರು ಉಸ್ತುವಾರಿ ನೇಮಕದ ಬಗ್ಗೆ ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈಗಾಗಲೇ ಬೆಂಗಳೂರು ಉಸ್ತುವಾರಿಗಾಗಿ ಆರ್.ಅಶೋಕ ಹಾಗೂ ವಿ.ಸೋಮಣ್ಣ ಹೋರಾಟ ಮಾಡುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಗಳು ಕೇಳಿದ ಪ್ರಶ್ನೆಗೆ ಈ ರೀತಿ ಸಿಎಂ ಪ್ರತಿಕ್ರಿಯಿಸಿದ್ದಾರೆ.

ನಾಮಪತ್ರ ವಾಪಸ್ ಪಡೆಯುವುದು ಅವರಿಗೆ ಬಿಟ್ಟ ವಿಚಾರ:
ಹಾನಗಲ್ ಉಪ ಚುನಾವಣೆಯ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್.ಬಳ್ಳಾರಿ ಅವರು ನಮ್ಮ ಕುಟುಂಬದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ನಾನು ಜಿಲ್ಲೆಯಲ್ಲಿ ಇರುವ ವಿಚಾರ ತಿಳಿದು ನಮ್ಮನ್ನು ಭೇಟಿ ಮಾಡಲು ಬಂದು ಮಾತಾಡಿದ್ದಾರೆ. ಅದರೆ ನಾಮಪತ್ರ ವಾಪಸ್ಸು ತೆಗೆದುಕೊಳ್ಳುವ ಬಗ್ಗೆ ಅವರಿಗೆ ಬಿಟ್ಟ ವಿಚಾರ ಎಂದು ಸಿಎಂ ತಿಳಿಸಿದರು.

ನಗರದ ಜಿಎಂಐಟಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲಾಯ ಪ್ರಮುಖರ ಜೊತೆ ಚರ್ಚೆ ಮಾಡಲಾಗಿದೆ. ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ನಿನ್ನೆ ಕೆಲ ಶಾಸಕರ ಜೊತೆ ಮಾತುಕತೆ ನಡೆಸಲಾಗಿದೆ. ಹಾವೇರಿ ಮುಖಂಡರ ಜೊತೆಯೂ ಚರ್ಚಿಸುವುದಾಗಿ ಹೇಳಿದರು.

Facebook Comments