ಕೊರೋನಾ ಸೋಂಕು ಏರಿಕೆಯಲ್ಲಿ ದೇಶದಲ್ಲೇ ಬೆಂಗಳೂರು ಫಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.25- ಸೋಂಕಿತರ ಏರಿಕೆಯಲ್ಲಿ ಸಿಲಿಕಾನ್ ಸಿಟಿ ಮೊದಲ ಸ್ಥಾನ ಪಡೆದುಕೊಂಡಿದೆ.ದೇಶದ ಮಹಾನಗರಗಳಲ್ಲಿ ಕಳೆದ 10 ದಿನಗಳಲ್ಲಿ ಕೊರೊನಾ ಸೋಂಕಿತರ ಏರಿಕೆಯಲ್ಲಿ ನಗರ ಉಳಿದ ನಗರಗಳನ್ನು ಹಿಂದಿಕ್ಕಿದೆ.

ಇದುವರೆಗೂ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದ ದೆಹಲಿ, ಮುಂಬೈ, ಚೆನ್ನೈನಂತಹ ಮಹಾನಗರಗಳನ್ನೂ ಮೀರಿಸಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ.

ಕಳೆದ 10 ದಿನಗಳಲ್ಲಿ ನಗರದಲ್ಲಿ ಬರೋಬ್ಬರಿ 19,498 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಬೆಂಗಳೂರಿನಲ್ಲಿ ಶೇಕಡಾವಾರು 49.73ರಷ್ಟು ಸೋಂಕಿತರ ಸಂಖ್ಯೆ ಹೆಚ್ಚಳಗೊಂಡಿದೆ.

ಕಳೆದ 10 ದಿನಗಳಿಂದ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರಿಕೆಯಾಗುತ್ತಿದ್ದು, ದೇಶದ ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಬೆಂಗಳೂರು 4ನೆ ಸ್ಥಾನ ಪಡೆದುಕೊಂಡಿದೆ.

ಭವಿಷ್ಯದಲ್ಲೂ ಕೊರೊನಾ ಅಟ್ಟಹಾಸ ಇದೇ ರೀತಿ ಮುಂದುವರಿದರೆ ಇಲ್ಲಿ ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ.

ಇಂತಹ ಪರಿಸ್ಥಿತಿಗೆ ರಾಜ್ಯಸರ್ಕಾರ ಮತ್ತು ಬಿಬಿಎಂಪಿಯೇ ನೇರ ಹೊಣೆಯಾಗಿದ್ದು, ಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೆಂಗಳೂರನ್ನು ಕೊರೊನಾ ಮುಕ್ತ ನಗರವನ್ನಾಗಿಸಲು ಪಣ ತೊಡಬೇಕಿದೆ.

 

Facebook Comments

Sri Raghav

Admin