ಬೆಂಗಳೂರು ಕರಗ ಆಚರಣೆ ಕುರಿತು ಏ.20ರ ನಂತರ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ. 5- ಐಸಿಹಾಸಿಕ ಬೆಂಗಳೂರು ಕರಗವನ್ನು ಆಚರಣೆ ಮಾಡಬೇಕೋ ಬೇಡವೋ ಎಂಬುದನ್ನು 20ರ ನಂತರ ತೀರ್ಮಾನಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್‍ಗುಪ್ತಾ ತಿಳಿಸಿದ್ದಾರೆ. ಕರಗ ಆಚರಣೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ನಂತರ ಮಾತನಾಡಿದ ಅವರು, ಬೆಂಗಳೂರಿನ ಐತಿಹಾಸಿಕ ಕರಗ ಬಹಳ ವಿಜೃಂಭಣೆಯಿಂದ ಆಚರಿಸುವ ಪದ್ಧತಿ ಇದೆ.

ಆದರೆ ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಕೂಡ ಆಚರಣೆ ಮಾಡಲು ಸಾಧ್ಯವಾಗಲಿಲ್ಲ. ಸರಳವಾಗಿ ವಿಧಿವಿಧಾನಗಳಂತೆ ದೇವಾಲಯದಲ್ಲೇ ಪೂಜಿಸಿ, ಮೆರವಣಿಗೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಾರಿಯೂ ಸಹ ಕೊರೊನಾ ಹೆಚ್ಚಾಗುತ್ತಿದ್ದು, ಉತ್ಸವ ಮಾಡಬೇಕೆ, ಬೇಡವೇ ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು. ಸರ್ಕಾರದ ಆದೇಶದಂತೆ ಏ.20ರವರಗೂ ನಿರ್ಬಂಧವಿದೆ.

ನಿರ್ಬಂಧ ಮುಗಿದ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನಿಸಲಾಗುವುದು ಎಂದರು. ನಗರ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ಕರಗ ಉತ್ಸವವನ್ನು ಆಡಳಿತ ಮಂಡಳಿ ನಡೆಸುತ್ತಿತ್ತು. ಕೆಲವು ಗೊಂದಲಗಳಿಂದ ದೇವಾಲಯದ ಆಡಳಿತ ಮಂಡಳಿ ಇಲ್ಲ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ಉತ್ಸವ ಸಮಿತಿಯನ್ನು ನೇಮಿಸಲಾಗುತ್ತದೆ.
ಕರಗ ಮುಗಿಯುವವರೆಗೂ ನಮ್ಮ ಆಡಳಿತ ಅಧಿಕಾರಿಯೇ ಕರಗವನ್ನು ಮಾಡುತ್ತಾರೆ. ಉತ್ಸವ ಸಮಿತಿಗೆ ಉಪ ಆಯುಕ್ತರನ್ನು ಕೂಡಲೇ ನೇಮಿಸಲಾಗುವುದು ಎಂದು ತಿಳಿಸಿದರು.

Facebook Comments