ಬೆಂಗಳೂರು ಕರಗದ ಮೇಲೆ ಕೊರೊನ ಕರಿಛಾಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಿಶ್ವವಿಖ್ಯಾತ ಬೆಂಗಳೂರು ಕರಗದ ಮೇಲೆ ಕೊರೋನಾ ವೈರಸ್ ಕರಾಳ ಛಾಯೆ ಬೀರಿದೆ. ಪಾರಂಪರಿಕ ಧಾರ್ಮಿಕ ಆಚರಣೆಯಾದ ಬೆಂಗಳೂರು ಕರಗಕ್ಕೆ ಕೊರೋನಾ ಆತಂಕ ಎದುರಾಗಿದ್ದು, ಯಾವ ರೀತಿ ಉತ್ಸವ ಆಚರಿಸಬೇಕೆಂದು ಮುಜರಾಯಿ ಇಲಾಖೆ  ಅಧಿಕಾರಿಗಳಲ್ಲಿ ಗೊಂದಲ ಎದುರಾಗಿದೆ.

ಮಾ.31ಕ್ಕೆ ಕರಗ ಆರಂಭವಾಗಿ ಏ.8ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ, ಬೆಂಗಳೂರು ಟೆಕ್ಕಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕರಗ ಉತ್ಸವಕ್ಕೆ ಕಂಟಕ ಎದುರಾಗಿದೆ. ದೇವಾಲಯದ ಆಡಳಿತ ಮಂಡಳಿ, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಭಕ್ತರಲ್ಲಿ ಕರಗ ಆಚರಣೆ ಸಂಬಂಧ ಏನು ಮಾಡಬೇಕು ಎಂಬುದರ ಬಗ್ಗೆ ದಿಕ್ಕು ತೋಚದಾಗಿದೆ.

ಸ್ಥಳೀಯ ಶಾಸಕರು, ಬಿಬಿಎಂಪಿ, ಪೊಲೀಸ್ ಇಲಾಖೆ, ಮುಜರಾಯಿ ಅಧಿಕಾರಿಗಳ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ. ಧಾರ್ಮಿಕ ಆಚರಣೆ ವಿಶ್ವವಿಖ್ಯಾತ ಕರಗಕ್ಕೆ ರಾಜಧಾನಿ ಬೆಂಗಳೂರು ಈಗಾಗಲೇ ಸಜ್ಜುಗೊಳ್ಳಬೇಕಾಗಿತ್ತು.

ಧರ್ಮರಾಯ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಮುಂದಿನ ವಾರದಿಂದ ಪ್ರಾರಂಭವಾಗಬೇಕಿತ್ತು. ಆದರೆ, ನಗರದಲ್ಲಿ ಕೊರೋನಾ ಭೀತಿ ಇರುವುದರಿಂದ ಇನ್ನೂ ಯಾವ ಕಾರ್ಯಕ್ರಮವೂ ಸ್ಪಷ್ಟವಾಗಿಲ್ಲ

Facebook Comments