ಬೆಂಗಳೂರು ಗಲಭೆ ಪ್ರಕರಣ : ಮ್ಯಾಜಿಸ್ಟ್ರೇಟ್ ತನಿಖೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಗಲಭೆ ಪ್ರಕರಣದ ಮ್ಯಾಜಿಸ್ಟ್ರೇಟ್ ವಿಚಾರಣೆ ಇಂದಿನಿಂದ ಆರಂಭಗೊಂಡಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿಯ ಸಲಹೆಗಾರರಾದ ಸಿಟಿ ಸಿವಿಲ್ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಜಿ.ಎಸ್. ರೇವಣಕರ್, ಸದಸ್ಯರಾದ ಬೆಂಗಳೂರು ಉಪ ವಿಭಾಗದ ದಂಡಾಧಿಕಾರಿ (ಉಪವಿಭಾ ಗಾಧಿಕಾರಿ), ತಾಲ್ಲೂಕು ದಂಡಾಧಿಕಾರಿ (ತಹಸೀ ಲ್ದಾರ್) ಅವರ ಸಮ್ಮುಖದಲ್ಲಿ ವಿಚಾರಣೆ ಆರಂಭಗೊಂಡಿದೆ.

ಗಲಭೆಗೆ ಕಾರಣವೇನು, ಗಲಭೆಯಿಂದಾದ ನಷ್ಟವೇನು, ಗಲಭೆಯಲ್ಲಿ ಬಂಧಿತರಾದವರು ನಿಜವಾದ ಅಪರಾಧಿಗಳೇ, ಗಲಭೆಯ ಹಿಂದಿನ ಉದ್ದೇಶವೇನು ಎಂಬೆಲ್ಲ ವಿಷಯಗಳನ್ನು ವಿಚಾರಣಾ ಸಮಿತಿ ಪರಿಶೀಲನೆ ನಡೆಸಲಿದೆ. ಗಲಭೆಯಲ್ಲಿ ವಾಹನ ಕಳೆದುಕೊಂಡವರು, ಹ¯್ಲÉಗೊಳಗಾದವರು, ಆಸ್ತಿ ನಷ್ಟವಾದವರು ವಿಚಾರಣಾ ಸಮಿತಿಯ ಮುಂದೆ ಹಾಜರಾಗಿ ಹೇಳಿಕೆ ನೀಡಬಹುದು.

ಘಟನೆ ಬಗ್ಗೆ ಸಾರ್ವಜನಿಕರು ಸಾಕ್ಷಿ ಕೊಡ ಬಹುದು, ಸಾಕ್ಷಿಗಳು ನೀಡುವ ಹೇಳಿಕೆಯನ್ನು ಗೌಪ್ಯವಾಗಿಡಲಾಗುತ್ತದೆ. ಗಲಭೆಗೆ ಪ್ರಾಥಮಿಕ ಕಾರಣಗಳೇನು, ಈ ಬಗ್ಗೆ ಮೂನ್ಸೂಚನೆ ಇರಲಿಲ್ಲವೇ? ಠಾಣೆ ಬಳಿ ದೂರು ಕೊಡಲು ಬಂದಾಗ ಲೋಪದೋಷಗಳಾಗಿತ್ತಾ? ದೂರು ಆಧರಿಸಿ ಎಫ್‍ಐಆರ್ ದಾಖಲು ಮಾಡಲು ಎಷ್ಟು ಸಮಯವಾಯ್ತು, ಗಲಭೆ ಕೋರರ ಗುಂಪು ಗೂಡುತ್ತಿರುವ ಮಾಹಿತಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತೆ? ಮಾಹಿತಿ ಇದ್ದರೂ ಹಿರಿಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ಕಳುಹಿಸಿ, ಪರಿಸ್ಥಿತಿ ನಿಯಂತ್ರಿಸಲು ಏಕೆ ಕ್ರಮ ಕೈಗೊಳ್ಳಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದವರ ಪರವಾಗಿ ದೂರುಗಳಿದ್ದರೆ ಅವುಗಳ ಬಗ್ಗೆಯೂ ಸಮಿತಿ ವಿಚಾರಣೆ ನಡೆಸಲಿದೆ.

ಗಲಭೆ ನಿಯಂತ್ರಣಕ್ಕೆ ಮಧ್ಯರಾತ್ರಿ ನಡೆದ ಗೋಲಿಬಾರ್ ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 35 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪೆÇಲೀಸ್ ಠಾಣೆಗಳು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಹಲವಾರು ಸಾರ್ವಜನಿಕರ ಮನೆಗಳ ಮನೆ ಗಳಿಗೂ ಹಾನಿ ಮಾಡಲಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ನೂರಾರು ವಾಹನಗಳನ್ನು ಒಂದು ವರ್ಗದ ಗುಂಪಿನ ಗಲಭೆಕೋರರು ಸುಟ್ಟು ಹಾಕಿದ್ದರು.

ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಸುಮಾರು 400 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.  ಘಟನೆಯ ನಿಷ್ಪಕ್ಷಪಾತ ವಿಚಾರಣೆಗಾಗಿ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿ, ಮೂರು ತಿಂಗಳಲ್ಲಿ ವಿಚಾರಣೆ ನಡೆಸಿ ಜಿ¯್ಲÁಧಿಕಾರಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ವಿಚಾರಣೆ ಆರಂಭವಾಗಿದೆ. ಗಲಭೆಯಲ್ಲಿ, ಗಲಭೆಯ ನಂತರ ಬಾಧಿತರಾಗಿರುವವರು ವಿಚಾರಣಾ ಸಮಿತಿಯ ಮುಂದೆ ಹಾಜರಾಗಬಹುದಾಗಿದೆ.

Facebook Comments