ಟ್ಯಾಕ್ಸಿ ಚಾಲಕನ ಮಗಳ ಚಿನ್ನದ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗೇಪಲ್ಲಿ,ಏ.25- ಗಡಿ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳ ಚಿನ್ನದ ಬೇಟೆ ಮುಂದುವರೆದಿದ್ದು, ಪಟ್ಟಣದ ಕೀರ್ತಿರೆಡ್ಡಿ.ಎನ್. ಎಂ.ಎಸ್ಸಿ (ಗಣಿತ) ಪದವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2ನೇ ರ‍್ಯಾOಕ್ ಪಡೆದು, ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕಂಡು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

ಪಟ್ಟಣದ 2ನೇ ವಾರ್ಡಿನ ಏರ್‍ಪೆಪೋರ್ಟ್ ಟ್ಯಾಕ್ಸಿ ಚಾಲಕರಾಗಿರುವ ಪಿ.ನರಸಿಂಹರೆಡ್ಡಿ ಮತ್ತು ಶಾಂತಿನಿಕೇತನ್ ಶಾಲೆಯ ಶಿಕ್ಷಕಿ ಪಿ.ಎನ್.ಶಕುಂತಲ ರವರ ಪುತ್ರಿ ಕೀರ್ತಿರೆಡ್ಡಿ.ಎನ್. ಅತ್ಯಂತ ಬಡತನದ ಹಿನ್ನಲೆಯಿಂದಲೇ ಬಂದವರು.

ಬಡತನವನ್ನು ಮೆಟ್ಟಿ ಶೈಕ್ಷಣಿಕ ಸಾಧನೆ ತೋರಿ ಬಡತನಕ್ಕೂ ಸಾಧನೆಗೂ ಸಂಬಂಧವೇ ಇಲ್ಲ ಎಂಬುದನ್ನು ಸಾಭೀತುಪಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಎಂಎಸ್ಸಿ ಪದವಿಯಲ್ಲಿ 2ನೇ ರ್ಯಾಂಕ್ ಪಡೆದಿರುವುದೇ ಅಲ್ಲದೆ ಎರಡು ಚಿನ್ನದ ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಹಿಂದುಳಿದ ತಾಲ್ಲೂಕಿನ ಕೀರ್ತಿತಂದಿದ್ದಾರೆ.

ಐದು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು ಮತ್ತೊಂದು ವಿಷಯದಲ್ಲಿ 97 ಅಂಕಗಳನ್ನು ಪಡೆದಿರುವುದು ವಿಶೇಷವಾಗಿದೆ. ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಗಣ್ಯರಿಂದ ಪದವಿ ಪ್ರಮಾಣ ಪತ್ರದ ಜೊತೆಗೆ ಚಿನ್ನದ ಪದಕಗಳನ್ನು ತನ್ನ ಕೊರಳಿಗೆ ಹಾಕಿಸಿಕೊಂಡಿದ್ದಾರೆ.

ಪಟ್ಟಣದ ಡಾ.ಎಚ್ಚೆನ್ ಸ್ಥಾಪಿಸಿದ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದ ಕೀರ್ತಿರೆಡ್ಡಿ.ಎನ್. ಬಿಎಸ್ಸಿ ಪದವಿಯಲ್ಲಿಯೂ 2ನೇ ರ್ಯಾಂಕ್ ಪಡೆದು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು. ಹೆಸರಿಗೆ ತಕ್ಕಂತೆ ಪೋಷಕರ ಹಾಗು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

ಮಗಳ ಸಾಧನೆ ಹೆಮ್ಮೆ ಎನಿಸುತ್ತಿದೆ:
ಮಗಳ ಸಾಧನೆ ಹೆಮ್ಮೆ ಎನಿಸುತ್ತಿದೆ. ಪೋಷಕರಾದ ನಮಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಡಿಗ್ರಿ ಹಂತದಿಂದಲೇ ಅವಳಲ್ಲಿ ಸಾಧಿಸಬೇಕೆಂಬ ಛಲ ಮನಸ್ಸಿನಲ್ಲಿ ಇದ್ದೇ ಇತ್ತು. ಸಾಧನೆ ಇಷ್ಟಕ್ಕೆ ನಿಲ್ಲಬಾರದು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂಬ ಆಸೆ ನಮ್ಮದು ಎಂದು ತಂದೆ ನರಸಿಂಹ ರೆಡ್ಡಿ ಹೇಳುತ್ತಾರೆ.

ಪೋಷಕರಿಗೆ ಸಲ್ಲುತ್ತದೆ ಕೀರ್ತಿ :
ನನ್ನ ಸಾಧನೆ ಮತ್ತು ಯಶಸ್ಸಿನ ಹಿಂದೆ ಪೋಷಕರು ಮತ್ತು ಪ್ರೊಫೆಸರ್ಸ್ ಪ್ರಮುಖ ಕಾರಣ. ನನ್ನ ಶ್ರಮಕ್ಕೆ ಅವರ ನಿರಂತರ ಪ್ರೊತ್ಸಾಹ ನನ್ನಲ್ಲಿ ಮತ್ತಷ್ಠು ಉತ್ಸಾಹ ಹೆಚ್ಚಿಸಿತ್ತು. ಚಿನ್ನದ ಪದಕದ ಜೊತೆಗೆ ರ್ಯಾಂಕ್ ಪಡೆದಿರುವುದುದಕ್ಕೆ ಸಂತಸವಾಗುತ್ತಿದೆ. ಎಂದರು.

Facebook Comments