ಮೂವರು ಗಣ್ಯರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.20- ಬೆಂಗಳೂರು ವಿವಿಯ 54ನೇ ವಾರ್ಷಿಕ ಘಟಿಕೋತ್ಸವದ ಅಂಗವಾಗಿ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸೇರಿದಂತೆ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್, 65039 ವಿದ್ಯಾರ್ಥಿಗಳ ಪದವಿ ಸ್ವೀಕರಿಸಲಿದ್ದಾರೆ.

ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಕುಲಪತಿ ಪ್ರೊ.ವೇಣುಗೋಪಾಲ್ ಮಾತನಾಡಿ, ಇದೇ 22ರಂದು ಬೆಳಗ್ಗೆ 11 ಗಂಟೆಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಂಜುನಾಥ್ ಸೇರಿದಂತೆ ಪದ್ಮಶ್ರೀ ಪುರಸ್ಕøತ ಹಾಗೂ ವೈದ್ಯಕೀಯ ನಿರ್ದೇಶಕರು ಡಾ.ಕಾಮಿನಿ ರಾವ್, ಸಮಾಜ ಸೇವಕ ಎಸ್.ವಿ.ಸುಬ್ರಹ್ಮಣ್ಯ ಗುಪ್ತ ಅವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಘಟಿಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ 65039 ಅಭ್ಯರ್ಥಿಗಳು ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ. ಒಟ್ಟು 166 ವಿದ್ಯಾರ್ಥಿಗಳು ಪಿಎಚ್‍ಡಿ ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದರು.

328 ಚಿನ್ನದ ಪದಕಗಳಿಗೆ 216 ಅಭ್ಯರ್ಥಿಗಳು ಭಾಜನರಾಗಿ ದ್ದಾರೆ. ಆಚಾರ್ಯ ಇನ್‍ಸ್ಟಿಟ್ಯೂಟ್ ಆಫ್ ಗ್ರಾಜ್ಯುಟಿ ಸ್ಟಡೀಸ್‍ನ ಕೆ.ಪಿ.ಮಂಜು, ಗಣಿತಶಾಸ್ತ್ರ ವಿಭಾಗದ ಮನೋಹರ್, ಸಂಹನ ವಿಭಾಗದ ಮುನಿರಾಜು ಎಂಬು ವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಚಿನ್ನದ ಪದಕಗಳಿಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಕೆ.ವಿ.ವಿನೂತ ಅವರಿಗೆ ರಸಾಯಾನ ಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ, ವರಲಕ್ಷ್ಮಿ .ಆರ್ ಬಿಎಸ್ಸಿ ವಿಭಾಗದಲ್ಲಿ 4, ಶಂಕರ ಭಾಷ್ಯಂ ಬಿಕಾಂ-5, ಎನ್.ಸೌಮ್ಯ ಬಿಇಡಿ ವಿಭಾಗ-3, ವರ್ಷಿತ ಬಿಇ ಎಲೆಕ್ಟ್ರಾನಿಕ್ ವಿಭಾಗ- 2 ಚಿನ್ನದ ಪದಕಗಳನ್ನು ನೀಡಲಾಗುವುದು ಎಂದರು. ಪತ್ರಿಕಾಗೋಷ್ಟಿಯಲ್ಲಿ ರಿಜಿಸ್ಟ್ರಾರ್ ಶಿವರಾಜ್(ಮೌಲ್ಯಮಾಪನ) , ರಿಜಿಸ್ಟ್ರಾರ್ ಬಿ.ಕೆ.ರವಿ ಮತ್ತಿತರರು ಇದ್ದರು.

Facebook Comments