ಅಕ್ರಮ ಪಿಸ್ತೂಲು, ಗುಂಡು ಮಾರಾಟ ದಂಧೆಯಲ್ಲಿ ಸ್ಯಾಂಡಲ್ವುಡ್ ನಟ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Sarkar--01

ಬೆಂಗಳೂರು,ನ.4- ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಚಲನಚಿತ್ರ ನಾಯಕ ನಟ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಎರಡು ಪಿಸ್ತೂಲು ಹಾಗೂ 21 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.  ಹುಬ್ಬಳ್ಳಿಯ ಗಣೇಶ್‍ಪೇಟೆಯ ಶೆಟ್ಟರ ಓಣಿ ನಿವಾಸಿ, ಸರ್ಕಾರ್ ಚಲನಚಿತ್ರದ ನಾಯಕ ನಟ ಜಗದೀಶ್ ಎಸ್.ಹೊಸಮಠ (25), ಎಚ್‍ಎಎಲ್‍ನ ಇಸ್ಲಾಮ್‍ಪುರ 1ನೇ ಮುಖ್ಯರಸ್ತೆ 6ನೇ ಕ್ರಾಸ್ ನಿವಾಸಿ ಮೊಹಮ್ಮದ್ ನಿಜಾಮ್(25), ನ್ಯೂ ತಿಮ್ಮಸಂದ್ರ ಜಿ.ಎಂ.ಪಾಳ್ಯ 4ನೇ ಮುಖ್ಯರಸ್ತೆ,4ನೇ ಕ್ರಾಸ್ ನಿವಾಸಿ ಬಿ.ಜಿ.ಸತೀಶ್‍ಕುಮಾರ್(44), ಕೊತ್ತನೂರು ಕೆ.ನಾರಾಯಣಪುರ ಗೋಲ್ಡನ್ ಫಾಮ್ರ್ಸ್ ಅಪಾರ್ಟ್‍ಮೆಂಟ್ ನಿವಾಸಿ ಸಯ್ಯದ್ ಸಮೀರ್ ಅಹಮ್ಮದ್ ಬಂಧಿತ ಆರೋಪಿಗಳು.

ಆರೋಪಿಗಳಾದ ಮಹಮ್ಮದ್ ನಿಜಾಮ್ ಮತ್ತು ಜಗದೀಶ್ ಎಚ್‍ಎಎಲ್‍ನ ಜಗದೀಶ್ ನಗರ ಬೆಮಲ್ ಆಡಿಟೋರಿಯಂ, ಬೆಮಲ್‍ಟೌನ್ ಶಿಫ್ಟ್ ಕ್ವಾಟರ್ಸ್ ಬಳಿ ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಮಾರಾಟ ಮಾಡಲು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ಸಂಘಟಿತ ಅಪರಾಧ ದಳದ ಅಧಿಕಾರಿಗಳಾದ ಪ್ರಕಾಶ್ ಮತ್ತು ಪೊಲೀಸ್ ಇನ್‍ಸ್ಪೆಕ್ಟರ್ ರಾಜೀವ್ ಅವರ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಅವರಿಂದ ಒಂದು ಪಿಸ್ತೂಲು ಮತ್ತು 10 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗಿತ್ತು. ಆರೋಪಿಗಳು ನೀಡಿದ ಮಾಹಿತಿಯಂತೆ ಇನ್ನಿಬ್ಬರು ಆರೋಪಿಗಳಾದ ಸತೀಶ್ ಕುಮಾರ್ ಮತ್ತು ಸಯ್ಯದ್ ಸಮೀರ್‍ನನ್ನು ಬಂಧಿಸಲಾಗಿದೆ. ಮತ್ತೊಂದು ಅಕ್ರಮ ಪಿಸ್ತೂಲು, 11 ಜೀವಂತ ಗುಂಡುಗಳನ್ನು ವಶಪಡಿಕೊಂಡು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಹಾಗೂ ಡಿಸಿಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ವಿ.ಮರಿಯಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್‍ಗಳಾದ ಪ್ರಕಾಶ್, ಕೆ.ರಾಜು, ಮುರುಘೇಂದ್ರಯ್ಯ, ಪ್ರಕಾಶ್ ರಾಥೋಡ್, ಮಂಜುನಾಥ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Facebook Comments