ಬಂಗಾರಪೇಟೆಗೂ ಕೊರೊನಾ ಎಂಟ್ರಿ : 3 ಹಳ್ಳಿಗಳು ಸೀಲ್‍ಡೌನ್ 

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ ,ಜೂ.20- ತಾಲ್ಲೂಕಿನ ಕುಪ್ಪನಹಳ್ಳಿ ಮತ್ತು ಬನಹಳ್ಳಿ ಗ್ರಾಮದಲ್ಲಿರುವ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ. ಬನಹಳ್ಳಿಯಲ್ಲಿ ಹತ್ತು ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.  ಇತ್ತೀಚೆಗೆ ಕುಪ್ಪನಹಳ್ಳಿ ಗ್ರಾಮದಲ್ಲಿ ಕಾರ್ ಚಾಲಕನಿಗೆ ಪಾಸಿಟಿವ್ ದೃಢಪಟ್ಟಿದ್ದರಿಂದ ಆತನ ಸಂಪರ್ಕದಲ್ಲಿದ್ದ ಮಹಿಳೆಗೆ ಹೋಂ ಕ್ವಾರಂಟೈನ್ ಮಾಡಲಾಗಿತ್ತು.

ಇಬ್ಬರನ್ನು ಐಸೋಲೇಷನ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. 65 ವರ್ಷದ ಮಹಿಳೆಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಸೋಂಕಿತನ ಮನೆಯಿಂದ ನೂರು ಮೀಟರ್ ವ್ಯಾಪ್ತಿ ಸೀಲ್‍ಡೌನ್ ಮಾಡಲಾಗಿದೆ. ಮತ್ತಿಬ್ಬರ ವರದಿ ಬರಬೇಕಾಗಿದೆ.

ಮಹಿಳೆಯನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಪ್ಪನಹಳ್ಳಿ ಗ್ರಾಮದ ಮಹಿಳೆಗೆ ಪಾಸಿಟಿವ್ ಮಾಹಿತಿ ಬಂದ ತಕ್ಷಣ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಕೊರೊನಾ ವಿರುದ್ದ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದಾರೆ. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಂಕಂರ್ ನೇತೃತ್ವದಲ್ಲಿ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಮೂಲಕ ಆತಂಕವನ್ನು ದೂರ ಮಾಡುತ್ತಿದ್ದಾರೆ.

ಬನಹಳ್ಳಿ ಗ್ರಾಮದಲ್ಲಿ 23 ವರ್ಷದ ಮಹಿಳೆಗೆ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಸದರಿ ಸೋಂಕಿತ ಮನೆಯಿಂದ ನೂರು ಮೀಟರ್ ಸೀಲ್ ಡೌನ್ ಮಾಡಲಾಗಿದೆ.ಸೋಂಕಿತರ ಸಂಪರ್ಕದಲ್ಲಿದ್ದ 10 ಮಂದಿ ಸಂಬಂಧಿಕರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.ವೃದ್ದರು, ಮಕ್ಕಳು ಈ ಹತ್ತು ಮಂದಿಯಲ್ಲಿದ್ದಾರೆ. ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

ಸೋಂಕಿತ ಮಹಿಳೆಯ ಹಿನ್ನೆಲೆ ಗಮನಿಸಿದಾಗ ತಮಿಳುನಾಡಿನ ಕುಂಬಳದಲ್ಲಿ ವಿವಾಹವಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಹುಟ್ಟೂರಾದ ಬನಹಳ್ಳಿಯ ವಿಳಾಸ ನೀಡಿ ಬೂದಿಕೋಟೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುತ್ತಿದ್ದು. ಕಳೆದ ಸೋಮವಾರ ಚಿಕಿತ್ಸೆಗೆ ಆಗಮಿಸಿದಾಗ ಆರೋಗ್ಯ ಇಲಾಖೆ ಆಕೆಯ ಸ್ವ್ಯಾಬ್‍ನ್ನು ಪಡೆದುಕೊಂಡು ಲ್ಯಾಬ್ ಕಳುಹಿಸಿದ್ದರು. ನಿನ್ನೆ ರಾತ್ರಿ ಪಾಸಿಟಿವ್ ದೃಢಪಟ್ಟಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಂಗೋಜಿ, ಅಂಗನವಾಡಿ ಶಿಕ್ಷಕಿ, ಆಶಾ ಕಾರ್ಯಕರ್ತರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಸೋಂಕಿತ ಮನೆಗೆ ಕೋವಿಡ್ 19 ನೋಟೀಸ್ ಅಂಟಿಸಿದ್ದಾರೆ.ಮನೆಯಲ್ಲಿದ್ದ 10 ಮಂದಿ ಸ್ವ್ಯಾಬ್‍ನ್ನು ಸಂಗ್ರಹ ಮಾಡಿ ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದಾರೆ.

ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಆಲಂಬಾಡಿ ಜ್ಯೋತನಹಳ್ಳಿ ಪಂಚಾಯತ್ ಬನಹಳ್ಳಿ, ಸೂಲಿಕುಂಟೆ ಪಂಚಾಯತ್‍ನ ಕುಪ್ಪನಹಳ್ಳಿ, ದೊಡ್ಡೂರು ಕರಪನಹಳ್ಳಿ ಪಂಚಾಯತ್ ಎಂ.ವಿ ನಗರದಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮೂರು ಹಳ್ಳಿಗಳಲ್ಲಿ ಸೋಂಕಿತರ ನಿವಾಸ ದಿಂದ ನೂರು ಮೀಟರ್ ಸೀಲ್‍ಡೌನ್ ಮಾಡಲಾಗಿದೆ.

ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿ ಧೈರ್ಯದಿಂದ ಕೊರೊನಾ ಓಡಿಸಿ. ಕೊರೊನಾ ವಿರುದ್ದ ಹೋರಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ತಾಪಂ ಇಓ ವೆಂಕಟೇಶ್ ತಿಳಿಸಿದ್ದಾರೆ.

ಬಂಗಾರಪೇಟೆಯಲ್ಲಿ ಈ ವರೆಗೆ 13 ಜನ ಸೋಂಕಿತರಿದ್ದು, 7 ಜನರು ಗುಣ ಮುಖರಾಗಿದ್ದಾರೆ. ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣ ಸ್ಥಳೀಯ ಆಸ್ಪತ್ರಯಲ್ಲಿ ಬಂದು ಟೆಸ್ಟ್ ಮಾಡಿಸಿಕೊಳ್ಳಿ, ಒಬ್ಬರಿಂದ ಮತ್ತೊಬ್ಬರು ಸುಮಾರು 2 ಮೀಟರ್ ಅಂತರ ಇರಬೇಕು, ಆಗಾಗ್ಗೆ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಳ್ಳಿ, ಮಾಸ್ಕ್ ಬಳಿಸಿ, ಹೊಸಬರು ಊರುಗಳಿಗೆ ಬಂದಾಗ ಮಾಹಿತಿ ನೀಡಿ ಎಚ್ಚರ ವಹಿಸಿ.ವಾರಿಯರ್ಸ್‍ಗಳಾಗಿ ಕೊರೊನಾ ಓಡಿಸೋಣ ಎಂದು ತಹಸೀಲ್ದಾರ್ ಚಂದ್ರಮೌಳೇಶ್ವರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಹಸೀಲ್ದಾರ್ ಚಂದ್ರಮೌಳೇಶ್ವರ್, ತಾಪಂ ಇಓ ವೆಂಕಟೇಶ್, ವ್ಯವಸ್ಥಾಪಕ ಸುಭ್ರಮಣಿ, ಸಿಪಿಐ ಶ್ರೀಕಂಠಯ್ಯ, ವೈದ್ಯಾಧಿಕಾರಿ ಪುಣ್ಯಮೂರ್ತಿ, ಆರೋಗ್ಯ ಇಲಾಖೆಯ ಅನಿತ, ರವಿ, ಆದರ್ಶ, ಪಿಡಿಓ ಗಂಗೋಜಿ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು, ಕೋವಿಡ್ ಬಗ್ಗೆ ಗ್ರಾಮದಲ್ಲಿ ಅರಿವು ಮೂಡಿಸಿದ್ದಾರೆ.

Facebook Comments