ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗೆ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ಫಾರಿನರ್ಸ್ ಕಾಯ್ದೆಯಡಿ ಐದು ವರ್ಷ ಶಿಕ್ಷೆ ವಿಧಿಸಲಾಗಿದೆ.  ಬಾಂಗ್ಲಾದೇಶದ ಪ್ರಜೆ ಖಾದಿಜಾ (24) ಎಂಬ ಮಹಿಳೆ ಯಾವುದೇ ಪಾಸ್‍ಪೋರ್ಟ್ ಮತ್ತು ವೀಸಾ ಇಲ್ಲದೆ ನಗರದಲ್ಲಿ ನೆಲೆಸಿದ್ದ ಬಗ್ಗೆ ಬಸವೇಶ್ವರನಗರ ಠಾಣೆ ಇನ್ಸ್‍ಪೆಕ್ಟರ್ ಯಲ್ಲಪ್ಪ ಅವರು ಫಾರಿನರ್ಸ್ ಕಾಯ್ದೆ ಹಾಗೂ ಪಾಸ್‍ಪೆಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣವು ಸಿಸಿಎಚ್-57ರಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಬಾಂಗ್ಲಾ ಪ್ರಜೆಗೆ ಐದು ವರ್ಷ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಅವಧಿ ಮುಕ್ತಾಯವಾದ ನಂತರ ಬಾಂಗ್ಲಾ ದೇಶಕ್ಕೆ ಬಿಟ್ಟು ಬರಲು ಆದೇಶಿಸಿದೆ.

Facebook Comments