ನಾಳೆಯಿಂದ ಬ್ಯಾಂಕ್ ಕಡೆ ಹೋಗೋ ಮುನ್ನ ಇಲ್ಲಿ ಗಮನಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.30- ಭಾರತದ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಭಾನುವಾರ ಹಾಗೂ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜಾದಿನಗಳಾಗಿರುತ್ತವೆ. ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸುವ ಹಬ್ಬ, ಉತ್ಸವಗಳ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚುವರಿ ರಜಾದಿನಗಳು ಬರಲಿವೆ. ಅಲ್ಲದೆ ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತವೆ ಮತ್ತು ಎಲ್ಲಾ ಬ್ಯಾಂಕಿಂಗ್ ಕಂಪನಿಗಳಿಗೆ ಅನ್ವಯಿಸುವುದಿಲ್ಲ.

ಅಕ್ಟೋಬರ್ 2 ಶುಕ್ರವಾರ ಮಹಾತ್ಮ ಗಾಂ, ಅ.4 ಭಾನುವಾರ ಸಾರ್ವಜನಿಕ ರಜೆ, ಅ.8 ಗುರುವಾರ ಚೆಲ್ಲಮ್ ಪ್ರಾದೇಶಿಕ ರಜಾ ಪ್ರಾದೇಶಿಕ ರಜೆ, ಅ.10 ಎರಡನೇ ಶನಿವಾರ ಎಲ್ಲಾ ರಾಜ್ಯಗಳಿಗೂ ರಜೆ, ಅ.11 ಭಾನುವಾರ ಸಾರ್ವಜನಿಕ ರಜೆ, ಅ.17 ಶನಿವಾರ ಕಾಟಿ ಬಿಹು ಅಸ್ಸಾಂನಲ್ಲಿ ರಜೆ, ಅ.18 ಭಾನುವಾರ ಸಾರ್ವಜನಿಕ ರಜೆ, ಅ.23 ಶುಕ್ರವಾರ ಮಹಾ ಸಪ್ತಮಿ ಅನೇಕ ರಾಜ್ಯಗಳಲ್ಲಿ ರಜೆ,

ಅ.24 ಶನಿವಾರ, ಮಹಾ ಅಷ್ಟಮಿ, ಅನೇಕ ರಾಜ್ಯಗಳು, ಅ.25 ಭಾನುವಾರ ಸಾರ್ವಜನಿಕ ರಜೆ ಎಲ್ಲಾ ರಾಜ್ಯಗಳು, ಅ.26 ಸೋಮವಾರದಂದು ವಿಜಯ ದಶಮಿ ಅನೇಕ ರಾಜ್ಯಗಳು, ಅ.29 ಗುರುವಾರ ಮಿಲಾಡ್-ಎ-ಶರೀಫ್ ಪ್ರಾದೇಶಿಕ ರಜೆ, ಅ.30ರಂದು ಈದ್ ಇ ಮಿಲಾದ್ ಇರುವುದರಿಂದ ಅನೇಕ ರಾಜ್ಯಗಳಲ್ಲಿ ರಜೆ ಇರುತ್ತದೆ.

ಅಕ್ಟೋಬರ್ 31, ಶನಿವಾರದಂದು ಲಕ್ಷ್ಮಿ ಪೂಜೆ / ಮಹರ್ಷಿ ವಾಲ್ಮೀಕಿ ಜಯಂತಿಯಿದ್ದು, ರಾಜ್ಯ ಘೋಷಿತ ರಜಾದಿನಗಳ ಪ್ರಕಾರ ನಿರ್ದಿಷ್ಟ ಪ್ರದೇಶಗಳ ರಜಾದಿನಗಳನ್ನು ವಿವಿಧ ಪ್ರದೇಶಗಳಲ್ಲಿ ಆಚರಿಸಲಾಗುವುದು, ಆದರೆ ಗೆಜೆಟೆಡ್ ರಜಾದಿನಗಳಿಗಾಗಿ, ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

Facebook Comments

Sri Raghav

Admin